ADVERTISEMENT

ನುಗ್ಗೆಯಲ್ಲಿ ಹೇರಳ ಪೋಷಕಾಂಶ, ರಸಾಯನ ಧಾತುಗಳು

ಬೆಂಗಳೂರಿನ ವಿಜ್ಞಾನಿಗಳ ಸಂಶೋಧನೆಯಲ್ಲಿ ಪತ್ತೆ

ಕಲ್ಯಾಣ್‌ ರೇ
Published 18 ಮೇ 2019, 1:30 IST
Last Updated 18 ಮೇ 2019, 1:30 IST
ನುಗ್ಗೆ ಕಾಯಿ
ನುಗ್ಗೆ ಕಾಯಿ   

ನವದೆಹಲಿ:ಭಾರತದಾದ್ಯಂತ ಮನೆಯ ಹಿರಿಯಜ್ಜಿಯರ ಅಡುಗೆಯಲ್ಲಿ ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪಿಗೆ ಮೊದಲ ಸ್ಥಾನ ಇರುವುದು ಏತಕ್ಕೆ? ಇಂಥಹದ್ದೊಂದು ಪ್ರಶ್ನೆಯನ್ನು ಎದುರುಇಟ್ಟುಕೊಂಡು ಸಂಶೋಧನೆ ಆರಂಭಿಸಿದ ಬೆಂಗಳೂರಿನ ವಿಜ್ಞಾನಿಗಳ ತಂಡವು ಉತ್ತರವನ್ನು ಕಂಡುಕೊಂಡಿದೆ.

ಮಾನವ ಆರೋಗ್ಯವನ್ನು ಸುಧಾರಿಸಬಲ್ಲ ಐದು ಸ್ವರೂಪದ ರಸಾಯನ ಧಾತುಗಳು ಮತ್ತು ಮೂರು ಸ್ವರೂಪದ ಪೌಷ್ಟಿಕಾಂಶಗಳು ನುಗ್ಗೆಯಲ್ಲಿವೆ ಎಂಬುದನ್ನು ಬೆಂಗಳೂರಿನ ‘ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ’ (ಎನ್‌ಸಿಬಿಎಸ್‌) ವಿಜ್ಞಾನಿಗಳ ತಂಡವು ಕಂಡುಕೊಂಡಿದೆ. ಈ ಸಂಶೋಧನೆಗೆ ಸಂಬಂಧಿಸಿದ ವರದಿಯು ‘ಜಿನಾಮಿಕ್ಸ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

‘ನುಗ್ಗೆಕಾಯಿ, ಸೊಪ್ಪು ಮತ್ತು ಹೂವಿನಲ್ಲಿ ‘ಎ’, ‘ಸಿ’ ಮತ್ತು ‘ಇ’ ಪೌಷ್ಟಿಕಾಂಶಗಳು ಹೇರಳವಾಗಿವೆ. ಇವು ಕೊಬ್ಬು ಕರಗಿಸುವಿಕೆ, ಮಧುಮೇಹ ನಿಯಂತ್ರಣ, ನರಸಂಬಂಧಿ ಸಮಸ್ಯೆಗಳು ಮತ್ತು ಕ್ಯಾನ್ಸರ್‌ ನಿರೋಧಕವಾಗಿ ಕೆಲಸ ಮಾಡುತ್ತವೆ’ ಎಂದು ಸಂಶೋಧನಾ ತಂಡದ ಮುಖ್ಯಸ್ಥೆ ಆರ್.ಸೌಧಾಮಿನಿ ಮಾಹಿತಿ ನೀಡಿದ್ದಾರೆ.

ADVERTISEMENT

‘ಮಾನವನ ದೇಹದಲ್ಲಿರುವ ಕೊಬ್ಬು ಕರಗಿಸಿ ತೂಕವನ್ನು ನಿಯಂತ್ರಣದಲ್ಲಿ ಇರಿಸುವ ‘ಮೌರಿನ್’ ಮತ್ತು ‘ಕ್ವೆರ್ಸೆಟಿನ್’, ಕ್ಯಾನ್ಸರ್ ನಿರೋಧಕವಾಗಿ ಕೆಲಸ ಮಾಡುವ ‘ಕೇಂಫೆರಾಲ್’, ‘ಅರ್ಸೋಲಿಕ್’ ಮತ್ತು ‘ಒಲೀನೊಲಿಕ್’ ಧಾತುಗಳು ನುಗ್ಗೆಯಲ್ಲಿ ಹೇರಳವಾಗಿವೆ.ಬೇರೆ ಸೊಪ್ಪುಗಳಿಗಿಂತ ನುಗ್ಗೆ ಸೊಪ್ಪಿನಲ್ಲಿ 30 ಪಟ್ಟು ಹೆಚ್ಚು ಕಬ್ಬಿಣಾಂಶ ಮತ್ತು 100 ಪಟ್ಟು ಹೆಚ್ಚು ಕ್ಯಾಲ್ಸಿಯಂ ಇದೆ’ ಎಂದು ಸಂಶೋಧನಾ ತಂಡವು ಹೇಳಿದೆ.

‘ನೀರಿನ ಶುದ್ಧೀಕರಣ ಮತ್ತು ರಸಾಯನ ವಸ್ತುಗಳ ಸಂಸ್ಕರಣೆಗೆ ನುಗ್ಗೆಯನ್ನು ಬಳಸಿಕೊಳ್ಳಬಹುದು. ಈ ಮೂಲಕ ಜೈವಿಕ ವಿಜ್ಞಾನ ಕ್ಷೇತ್ರದಲ್ಲಿ ನುಗ್ಗೆಯ ವಾಣಿಜ್ಯ ಬಳಕೆಯನ್ನು ಪ್ರೋತ್ಸಾಹಿಸಬಹುದು’ ಎಂದು ಸೌಧಾಮಿನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.