ಸಾಂದರ್ಭಿಕ ಚಿತ್ರ
– ಐಸ್ಟಾಕ್ ಚಿತ್ರ
ನವದೆಹಲಿ: ಸ್ನೇಹಿತೆಯೊಂದಿಗೆ ಮಾತನಾಡಿದ ಎಂಬ ಕಾರಣಕ್ಕಾಗಿ ಹೊಟ್ಟೆಕಿಚ್ಚಿನಿಂದ ವ್ಯಕ್ತಿಯೊಬ್ಬನ ಕತ್ತನ್ನು ಸೀಳಿದ ಆರೋಪದಡಿ ಬಿ.ಕಾಂ. 2ನೇ ವರ್ಷದ ವಿದ್ಯಾರ್ಥಿಯನ್ನು ದೆಹಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತ ಯುವಕನನ್ನು ಅಕ್ಷತ್ ಶರ್ಮಾ ಎಂದು ಗುರುತಿಸಲಾಗಿದ್ದು, ಜೀವನೋಪಾಯಕ್ಕಾಗಿ ಈತ ಐಸ್‌ಕ್ರೀಂ ಮಾರುತ್ತಿದ್ದ. ಬ್ಲೇಡ್ ಇರಿತದಿಂದ ಗಾಯಗೊಂಡ ವ್ಯಕ್ತಿಯನ್ನು 21 ವರ್ಷದ ಹರ್ಷ ಭಾಟಿ ಎಂದು ಗುರುತಿಸಲಾಗಿದೆ. ಪರಿಚಿತ ಯುವತಿಯ ಸಂಪರ್ಕದಿಂದ ದೂರ ಇರುವಂತೆ ಹರ್ಷನಿಗೆ ಅಕ್ಷತ್ ಹಲವು ಬಾರಿ ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಜುಲೈ 17ಕ್ಕೆ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಹರ್ಷನನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ. ಘಟನೆ ಕುರಿತು ಪಾಂಡವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಯುವತಿಯೊಂದಿಗೆ ಅಕ್ಷತ್ ಭಾವನಾತ್ಮಕವಾಗಿ ಅಂಟಿಕೊಂಡಿದ್ದ. ಇದು ದಿನೇದಿನೇ ಹೆಚ್ಚುತ್ತಲೇ ಇತ್ತು. ಹರ್ಷನಿಗೆ ದೂರ ಇರುವಂತೆ ಹಲವು ಬಾರಿ ಈತ ಎಚ್ಚರಿಕೆ ನೀಡಿದ್ದ. ಘಟನೆ ನಂತರ ಅಕ್ಷತ್ ಮನೆ ತೊರೆದು ಪರಾರಿಯಾಗಿದ್ದ. ಈತನ ಪತ್ತೆಗೆ ಎರಡು ತಂಡ ರಚಿಸಲಾಗಿತ್ತು. ನಂತರ ಈತನನ್ನು ಅವರ ಮನೆಯ ಬಳಿಯೇ ಬಂಧಿಸಲಾಯಿತು’ ಎಂದು ಡಿಸಿಪಿ ಹೇಳಿದ್ದಾರೆ.
‘ವಿಚಾರಣೆ ಸಂದರ್ಭದಲ್ಲಿ ದಾಳಿ ನಡೆಸಿದ್ದನ್ನು ಅಕ್ಷತ್ ಒಪ್ಪಿಕೊಂಡಿದ್ದಾನೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.