ADVERTISEMENT

ಶಾಲಾ ಸಿಬ್ಬಂದಿ ನೇಮಕಾತಿ ಹಗರಣ: ಆರು ಮಂದಿ ಸಿಬಿಐ ವಶಕ್ಕೆ

ಪಿಟಿಐ
Published 18 ಫೆಬ್ರುವರಿ 2023, 14:19 IST
Last Updated 18 ಫೆಬ್ರುವರಿ 2023, 14:19 IST
   

ಕೋಲ್ಕತ್ತ : ‘ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಎಸ್‌ಎಸ್‌ಸಿ) ನಡೆಸಿದ ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಸಿಬಿಐ ಬಂಧಿಸಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಬಂಧಿತರು ಏಜೆಂಟರಂತೆ ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಿ ರಾಜ್ಯದ ವಿವಿಧ ಶಾಲೆಗಳಲ್ಲಿ ಉದ್ಯೋಗಕ್ಕೆ ಸೇರಲು ಸಹಾಯ ಮಾಡುತ್ತಿದ್ದರು ಎನ್ನಲಾಗಿದೆ’ ಎಂದು ಅವರು ಹೇಳಿದರು.

‘ಬಂಧಿತರ ವಿರುದ್ಧ ನಮಗೆ ನಿರ್ದಿಷ್ಟ ಸಾಕ್ಷಿಗಳು ಸಿಕ್ಕಿವೆ’ ಎಂದು ಸಿಬಿಐ ಶುಕ್ರವಾರ ಸಂಜೆ ತಿಳಿಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.