ಸುವೇಂದು ಅಧಿಕಾರಿ
ಕೋಲ್ಕತ್ತ: ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಎಂಸಿಯ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಗೆ ಎಸೆಯುತ್ತೇವೆ ಎಂದಿದ್ದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ವಿರುದ್ಧ ಪಶ್ಚಿಮ ಬಂಗಾಳ ವಿಧಾನಭೆಯಲ್ಲಿ ನಿಲುವಳಿ ಮಂಡಿಸಲಾಯಿತು.
ನಿಲುವಳಿಗೆ ಸದನದ ಧ್ವನಿಮತದ ಒಪ್ಪಿಗೆ ಸಿಕ್ಕಿತು.
ತಾವು ಮಂಡಿಸಿದ ಗಮನ ಸೆಳೆಯುವ ಸೂಚನೆಯನ್ನು ಸ್ಪೀಕರ್ ಬಿಮನ್ ಮುಖರ್ಜಿ ತಿರಸ್ಕರಿಸಿದ ಬೆನ್ನಲ್ಲೇ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಇದರ ಬೆನ್ನಲ್ಲೇ ಟಿಎಂಸಿಯ ಸಚೇತಕ ನಿರ್ಮಲ್ ಘೋಷ್ ಅವರು ಸುವೇಂದು ವಿರುದ್ಧ ನಿಲುವಳಿ ಮಂಡಿಸಿದರು.
ಸುವೇಂದು ಅಧಿಕಾರಿ ದೇಶದ ಧಾರ್ಮಿಕ ಹಾಗೂ ಸಾಮಾಜಿಕ ರಚನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ಘೋಷ್ ನಿಲುವಳಿ ಮಂಡನೆ ವೇಳೆ ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಎಂಸಿಯ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಗೆ ಎಸೆಯುತ್ತೇವೆ ಎಂದು ಸುವೇಂದು ಮಂಗಳವಾರ ಹೇಳಿದ್ದರು.
ಸುವೇಂದು ಅವರ ಈ ಹೇಳಿಕೆಗೆ ಕಿಡಿ ಕಾರಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ರಾಜ್ಯಕ್ಕೆ ಹುಸಿ ಹಿಂದುತ್ವವಾದವನ್ನು ತರುತ್ತಿದೆ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.