ADVERTISEMENT

ದಯಾಮರಣಕ್ಕಾಗಿ ಸ್ವಿಟ್ಜರ್ಲೆಂಡ್‌ಗೆ ಸ್ನೇಹಿತನ ಪ್ರಯಾಣಕ್ಕೆ ತಡೆ ಕೋರಿ ಅರ್ಜಿ

ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ಬೆಂಗಳೂರು ಮೂಲದ ಮಹಿಳೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 15:17 IST
Last Updated 12 ಆಗಸ್ಟ್ 2022, 15:17 IST
court
court   

ನವದೆಹಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ 48 ವರ್ಷದ ತನ್ನ ಸ್ನೇಹಿತ ವೈದ್ಯಕೀಯ ನೆರವಿನ ದಯಾಮರಣಕ್ಕಾಗಿ ಸ್ವಿಟ್ಜರ್ಲೆಂಡ್‌ಗೆ ತೆರಳಲು ಮುಂದಾಗಿದ್ದು, ಆತನ ಪ್ರಯಾಣಕ್ಕೆ ತಡೆ ನೀಡಬೇಕು ಎಂದು ಕೋರಿ ಬೆಂಗಳೂರು ಮೂಲದ ಮಹಿಳೆಯೊಬ್ಬರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ವಕೀಲ ಸುಭಾಶ್ಚಂದ್ರನ್ ಕೆ.ಆರ್‌ ಅವರ ಮೂಲಕ ಮಹಿಳೆ ಅರ್ಜಿ ಸಲ್ಲಿಸಿದ್ದಾರೆ.

‘ನನ್ನ ಸ್ನೇಹಿತ 2014ರಿಂದ ‘ದೀರ್ಘ ಕಾಲದ ಆಯಾಸ’ (ಕ್ರಾನಿಕ್ ಫೆಟಿಗ್ ಸಿಂಡ್ರೋಮ್) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸ್ವಿಟ್ಜರ್ಲೆಂಡ್‌ಗೆ ತೆರಳಿ, ವೈದ್ಯಕೀಯ ನೆರವಿನೊಂದಿಗೆ ದಯಾಮರಣಕ್ಕೆ ಯೋಜಿಸಿದ್ದಾರೆ. ಒಂದು ವೇಳೆ ಅವರ ಪ್ರಯಾಣವನ್ನು ತಡೆಯದಿದ್ದರೆ, ಸ್ನೇಹಿತನ ಕುಟುಂಬಕ್ಕೆ ಭರಿಸಲಾಗದ ನಷ್ಟವಾಗಲಿದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ADVERTISEMENT

ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಮುಂದಿನ ವಾರ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ವಕೀಲ ಸುಭಾಶ್ಚಂದ್ರನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.