
ಪಿಟಿಐ
ಹೈದರಾಬಾದ್ (ಪಿಟಿಐ): ಭಾರತ್ ಬಯೊಟೆಕ್ ಅಭಿವೃದ್ಧಿಪಡಿಸಿರುವ, ಮೂಗಿನ ಮೂಲಕ ನೀಡಬಹುದಾದ ಕೋವಿಡ್–19 ಲಸಿಕೆ ‘ಇನ್‌ಕೊವ್ಯಾಕ್’ಗೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಅನುಮೋದನೆ ದೊರೆತಿದೆ. ಭಾರತದಲ್ಲಿ ತುರ್ತು ಸಂದರ್ಭದಲ್ಲಿ 18 ವರ್ಷ ಮೀರಿದವರಿಗೆ ನೀಡಬಹುದಾಗಿದೆ.
ಪ್ರಾಥಮಿಕ ಸರಣಿ ಹಾಗೂ ಬೂಸ್ಟರ್ ಹಂತದಲ್ಲಿ ಬಳಸಲು ಅನುಮೋದನೆ ಪಡೆದ ಮೂಗಿನ ಮೂಲಕ ನೀಡಬಹುದಾದ ಮೊದಲ ಲಸಿಕೆ ಇದಾಗಿದೆ ಎಂದು ಈ ಕುರಿತ ಹೇಳಿಕೆಯಲ್ಲಿ ಭಾರತ್ ಬಯೊಟೆಕ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.