ADVERTISEMENT

ಭಾರತ್ ಜೋಡೊ ರಾಷ್ಟ್ರ ರಾಜಕಾರಣಕ್ಕೆ ‘ಕ್ರಾಂತಿಕಾರಿ ಕ್ಷಣ’ : ಜೈರಾಮ್ ರಮೇಶ್

ಪಿಟಿಐ
Published 20 ನವೆಂಬರ್ 2022, 11:12 IST
Last Updated 20 ನವೆಂಬರ್ 2022, 11:12 IST
ಜೈರಾಮ್ ರಮೇಶ್
ಜೈರಾಮ್ ರಮೇಶ್   

ಬುಲ್ಧಾನಾ:ಭಾರತ್ ಜೋಡೊ ಯಾತ್ರೆಯು ರಾಷ್ಟ್ರ ರಾಜಕಾರಣ ಮತ್ತು ಪಕ್ಷಕ್ಕೆ ‘ಕ್ರಾಂತಿಕಾರಿ ಕ್ಷಣ’. ಅದನ್ನು ಚುನಾವಣಾ ಯಶಸ್ಸಾಗಿ ಪರಿವರ್ತಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಭಾನುವಾರ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಯಾತ್ರೆಯ ಕೊನೆ ದಿನದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಪರ್ಯಾಯ ಹುಡುಕುತ್ತಿದ್ದರು ಹಾಗೂ ಬಿಜೆಪಿ ಮತ್ತು ಆರ್‌ಎಸ್‌ಎಸ್ ತೊಡೆದು ಹಾಕಲು ಬಯಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಪರ್ಯಾಯವನ್ನು ಪ್ರಸ್ತುತಪಡಿಸುವ ಏಕೈಕ ಸಿದ್ಧಾಂತವೆಂದರೆ ಕಾಂಗ್ರೆಸ್. ಯಾತ್ರೆಯು ರಾಷ್ಟ್ರ ರಾಜಕಾರಣ ಮತ್ತು ಕಾಂಗ್ರೆಸ್‌ಗೆ ಕ್ರಾಂತಿಕಾರಿ ಕ್ಷಣವೇ ಹೊರತು ಘಟನೆಯಲ್ಲ ಎಂದು ಹೇಳಿದರು.

ADVERTISEMENT

ನ.21 ಮತ್ತು 22 ರಂದು ಮಹಾರಾಷ್ಟ್ರದಲ್ಲಿ ವಿರಾಮದ ಬಳಿಕ ನ 23 ರಂದು ಯಾತ್ರೆಯು ಮಧ್ಯಪ್ರದೇಶಕ್ಕೆ ಸಾಗಲಿದೆ ರಮೇಶ್ ಹೇಳಿದರು.

ಕಾಂಗ್ರೆಸ್‌ನ ಹಿಂದಿನ ವೇಳಾಪಟ್ಟಿಯಂತೆ ಸೋಮವಾರ ಯಾತ್ರೆಯ ವಿಶ್ರಾಂತಿ ದಿನವಾಗಿತ್ತು. ಚುನಾವಣಾ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಸೋಮವಾರ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.