ADVERTISEMENT

ಬಿಹಾರ ವಿಧಾನಸಭೆ ಚುನಾವಣೆ: ಸಿಎಪಿಎಫ್‌ ಸಿಬ್ಬಂದಿಗಾಗಿ 1000 ಬೋಗಿ ಸಜ್ಜು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 15:42 IST
Last Updated 12 ಅಕ್ಟೋಬರ್ 2025, 15:42 IST
   

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯ ಭದ್ರತೆಗಾಗಿ ನಿಯೋಜನೆಗೊಳ್ಳಲಿರುವ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯ (ಸಿಎಪಿಎಫ್‌) 1 ಲಕ್ಷ ಸಿಬ್ಬಂದಿಯ ಓಡಾಟಕ್ಕಾಗಿ ಭಾರತೀಯ ರೈಲ್ವೆಯು 1000 ಬೋಗಿಗಳನ್ನು ಸಜ್ಳುಗೊಳಿಸಿರುವುದಾಗಿ ಹೇಳಿದೆ. 

ನವೆಂಬರ್‌ 6 ಮತ್ತು 11ರಂದು ಚುನಾವಣೆ ನಡೆಯಲಿದ್ದು, ಭದ್ರತೆ ಒದಗಿಸಲು ಜಮ್ಮು–ಕಾಶ್ಮೀರ, ಈಶಾನ್ಯ ಭಾರತದಿಂದ ಅರಸೇನಾ ಪಡೆಗಳು ಬಿಹಾರಕ್ಕೆ ತೆರಳಲಿವೆ. ಹೀಗಾಗಿ 18 ಬೋಗಿಗಳನ್ನು ಹೊಂದಿರುವಂತಹ 70 ರಿಂದ 80 ರೈಲುಗಳನ್ನು ಸೇವೆಗೆ ನಿಯೋಜಿಸಲು ಸಿದ್ದತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ರೈಲಿನಲ್ಲಿ ಎಸಿ ಹಾಗೂ ಎಸಿ ರಹಿತ ಸ್ಲೀಪರ್‌ ಸೌಲಭ್ಯ ಇರಲಿದ್ದು, ಪ್ರಯಾಣದ ವೇಳೆ ಅರಸೇನಾ ಪಡೆಯ ಎಲ್ಲಾ ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ಐಆರ್‌ಸಿಟಿಸಿ ಒದಗಿಸಲಿದೆ ಎಂದೂ ಮೂಲಗಳಿಂದ ತಿಳಿದುಬಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.