ADVERTISEMENT

₹40 ಸಾವಿರಕ್ಕೆ 4 ವರ್ಷದ ಮಗಳನ್ನು ಮಾರಿದ ಬಿಹಾರದ ದಂಪತಿ; ಬಾಲಕಿ ರಕ್ಷಣೆ

ಪಿಟಿಐ
Published 27 ನವೆಂಬರ್ 2024, 16:21 IST
Last Updated 27 ನವೆಂಬರ್ 2024, 16:21 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಭುವನೇಶ್ವರ: ಬಿಹಾರ ದಂಪತಿ ₹40 ಸಾವಿರಕ್ಕೆ 4 ವರ್ಷದ ಮಗಳನ್ನು ಒಡಿಶಾದ ಪೀಪ್ಲಿ ಪ್ರದೇಶದಲ್ಲಿರುವ ಮಕ್ಕಳಿಲ್ಲದ ದಂಪತಿಗೆ ಮಾರಿರುವ ಪ್ರಕರಣ ಬುಧವಾರ ವರದಿಯಾಗಿದೆ.

ADVERTISEMENT

ಮಗುವನ್ನು ರಕ್ಷಿಸಿರುವ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ಮಗು ಹೆತ್ತ ಪಾಲಕರು, ಖರೀದಿಸಿದ ದಂಪತಿ ಹಾಗೂ ಮಧ್ಯವರ್ತಿಗಳಿಬ್ಬರು ಸೇರಿದ್ದಾರೆ.

ಭುವನೇಶ್ವರದ ಮನೆ ಮಾಲೀಕ ಸಾರ್ಥಕ್ ಮೊಹಾಂತಿ ಎಂಬುವವರು ತಮ್ಮ ಮನೆಯಲ್ಲಿ ಬಾಡಿಗೆಗೆ ಇರುವ ದಂಪತಿಗೆ ಬಿಹಾರದ ದಂಪತಿ ತಮ್ಮ ಮಗುವನ್ನು ಮಾರಾಟ ಮಾಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನು ಆಧರಿಸಿ ಬಡಾಗಾಡಾ ಪೊಲೀಸರು ದಾಳಿ ನಡೆಸಿದ್ದರು. ಮಗುವನ್ನು ₹40 ಸಾವಿರಕ್ಕೆ ಮಾರಾಟ ಮಾಡಿರುವುದನ್ನು ದಂಪತಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬಾಲಕಿಯನ್ನು ಮಾರಿದ ದಂಪತಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬಾಲಕಿಯು ತನ್ನ ತಂದೆಯ ಮೊದಲ ಪತ್ನಿಯ ಮಗಳು ಎಂದು ಚೈಲ್ಡ್‌ಲೈನ್‌ ನಿರ್ದೇಶಕ ಬೇಣುಧರ ಸೇನಾಪತಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.