ADVERTISEMENT

ರಾಷ್ಟ್ರವ್ಯಾಪಿ ಜಾತಿಗಣತಿಗೆ ಆಗ್ರಹಿಸಿ ಬಿಹಾರ ನಿಯೋಗದಿಂದ ಪ್ರಧಾನಿ ಮೋದಿ ಭೇಟಿ

ಪಿಟಿಐ
Published 23 ಆಗಸ್ಟ್ 2021, 8:22 IST
Last Updated 23 ಆಗಸ್ಟ್ 2021, 8:22 IST
ನಿತೀಶ್‌ ಕುಮಾರ್‌
ನಿತೀಶ್‌ ಕುಮಾರ್‌   

ನವದೆಹಲಿ: ದೇಶದೆಲ್ಲೆಡೆ ಜಾತಿಗಣತಿ ನಡೆಸಬೇಕು ಎಂದು ಆಗ್ರಹಿಸಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ 10 ಪಕ್ಷಗಳ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಇಲ್ಲಿ ಭೇಟಿ ಮಾಡಿತು.

ನಿಯೋಗದಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಬಿಜೆಪಿ ಸೇರಿದಂತೆ ಇತರೆ ಪಕ್ಷಗಳ ಪ್ರತಿನಿಧಿಗಳು ಇದ್ದರು.

ಈ ವಿಷಯದ ಕುರಿತು ಪ್ರಧಾನಿಯವರ ನಿಲುವಿನ ಬಗ್ಗೆ ವರದಿಗಾರರು ಕೇಳಿದಾಗ, ‘ಪ್ರಧಾನಿ ಅವರು ಜಾತಿ ಆಧಾರಿತ ಜನಗಣತಿಯನ್ನು ನಿರಾಕರಿಸಿಲ್ಲ. ಎಲ್ಲಾ ಪಕ್ಷದ ಪ್ರತಿನಿಧಿಗಳ ಮಾತನ್ನು ಅವರು ತಾಳ್ಮೆಯಿಂದ ಆಲಿಸಿದರು’ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್ ಹೇಳಿದರು.

ADVERTISEMENT

‘ಜಾತಿ ಆಧಾರಿತ ಜನಗಣತಿಯು ಅಭಿವೃದ್ಧಿ ಯೋಜನೆಯನ್ನು ರೂಪಿಸುವಲ್ಲಿ ನೆರವಾಗಲಿದೆ’ ಎಂದು ನಿತೀಶ್‌ ಅಭಿಪ್ರಾಯಪಟ್ಟರು.

ಜಾತಿ ಜನಗಣತಿಗೆ ಬೆಂಬಲ ಸೂಚಿಸಿದ ತೇಜಸ್ವಿ ಯಾದವ್‌, ‘ಈ ಐತಿಹಾಸಿಕ ಕ್ರಮವು ಜನರಿಗೆ ಸಹಾಯ ಒದಗಿಸಲಿದೆ. ಮರಗಳು, ಪ್ರಾಣಿಗಳನ್ನು ಲೆಕ್ಕ ಮಾಡಬಹುದಾದರೇ, ಜನರನ್ನೂ ಗಣತಿ ಮಾಡಬಹುದು’ ಎಂದು ಅವರು ಹೇಳಿದರು.

‘ಬಿಹಾರದ ವಿರೋಧ ಪಕ್ಷವಾದ ಆರ್‌ಜೆಡಿಯು ಸರ್ಕಾರದ ಜನರ ಪರ ನೀತಿಗಳನ್ನು ಸದಾ ಬೆಂಬಲಿಸಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.