ADVERTISEMENT

ಬಿಜೆಪಿ ಒತ್ತಡದಿಂದ ನಮ್ಮ ಮೂವರು ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ: ಜನ ಸುರಾಜ್

ಪಿಟಿಐ
Published 21 ಅಕ್ಟೋಬರ್ 2025, 12:59 IST
Last Updated 21 ಅಕ್ಟೋಬರ್ 2025, 12:59 IST
<div class="paragraphs"><p> ಪ್ರಶಾಂತ್‌ ಕಿಶೋರ್‌ (ಸಂಗ್ರಹ ಚಿತ್ರ)</p></div>

ಪ್ರಶಾಂತ್‌ ಕಿಶೋರ್‌ (ಸಂಗ್ರಹ ಚಿತ್ರ)

   

ಪಟ್ನಾ: ಜನ ಸುರಾಜ್‌ ಪಕ್ಷದ ಮೂವರು ಅಭ್ಯರ್ಥಿಗಳು ಚುನಾವಣೆ ಕಣದಿಂದ ಹಿಂದೆ ಸರಿದಿರುವುದಕ್ಕೆ ಬಿಜೆಪಿ ಕಾರಣ ಎಂದು ಪಕ್ಷದ ವರಿಷ್ಠ ಪ್ರಶಾಂತ್‌ ಕಿಶೋರ್‌ ಆರೋಪಿಸಿದ್ದಾರೆ.

ಚುನಾವಣಾ ತಂತ್ರಜ್ಞ ಎಂದೇ ಖ್ಯಾತರಾಗಿದ್ದ ಪ್ರಶಾಂತ್ ಕಿಶೋರ್ ಹೊಸ ಪಕ್ಷ ಕಟ್ಟುವ ಮೂಲಕ ರಾಜಕಾರಣಿಯಾಗಿದ್ದಾರೆ. ಬಿಹಾರದಲ್ಲಿ ನವೆಂಬರ್‌ ತಿಂಗಳಲ್ಲಿ ನಡೆಯುಲಿರುವ ವಿಧಾನಸಭಾ ಚುನಾವಣೆಗೆ ಅವರ ಪಕ್ಷ ಸ್ಪರ್ಧೆ ಮಾಡುತ್ತಿದ್ದೆ.

ADVERTISEMENT

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮ ಪಕ್ಷದ ಮೂವರು ಅಭ್ಯರ್ಥಿಗಳು ಬಿಜೆಪಿ ಒತ್ತಡದ ಹಿನ್ನೆಲೆಯಲ್ಲಿ ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದಾರೆ ಎಂದರು.

ಚುನಾವಣೆಯಲ್ಲಿ ಸೋಲುವ ಭಯದಿಂದ ಆಡಳಿತಾರೂಢ ಎನ್‌ಡಿಎ ವಿರೋಧ ಪಕ್ಷದ ಅಭ್ಯರ್ಥಿಗಳಿಗೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗುತ್ತಿದೆ, ಇಲ್ಲಿಯವರೆಗೂ ದೇಶದಲ್ಲಿ ಇಂತಹ ಘಟನೆಗಳು ನಡೆದ ಉದಾಹರಣೆ ಇಲ್ಲ ಎಂದು ಆರೋಪಿಸಿದ ಅವರು, ಚುನಾವಣಾ ಆಯೋಗವು ಅಭ್ಯರ್ಥಿಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ತಮ್ಮ ಪಕ್ಷ 243 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಈ ಪೈಕಿ ದಾನಾಪುರ, ಬ್ರಹ್ಮಪುರ ಮತ್ತು ಗೋಪಾಲಗಂಜ್ ವಿಧಾನಸಭಾ ಕ್ಷೇತ್ರಗಳಿಂದ ತಮ್ಮ ಅಭ್ಯರ್ಥಿಗಳು ಹಿಂದೆಸರಿದಿದ್ದಾರೆ. ಇದರಿಂದ 240 ಕ್ಷೇತ್ರಗಳಲ್ಲಿ ಮಾತ್ರ ಪಕ್ಷದ ಸ್ಪರ್ಧೆ ಇರಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.