ADVERTISEMENT

ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸದಿರುವ ನನ್ನ ನಿರ್ಧಾರ ತಪ್ಪು: ಪ್ರಶಾಂತ್ ಕಿಶೋರ್

ಪಿಟಿಐ
Published 19 ನವೆಂಬರ್ 2025, 11:00 IST
Last Updated 19 ನವೆಂಬರ್ 2025, 11:00 IST
<div class="paragraphs"><p>ಪ್ರಶಾಂತ್ ಕಿಶೋರ್</p></div>

ಪ್ರಶಾಂತ್ ಕಿಶೋರ್

   

(ಪಿಟಿಐ ಚಿತ್ರ)

ಪಟ್ನಾ: 'ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರುವ ನನ್ನ ನಿರ್ಧಾರವು ತಪ್ಪು ಎಂದು ಪರಿಗಣಿಸಬಹುದು' ಎಂದು ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಇಂದು (ಬುಧವಾರ) ಹೇಳಿದ್ದಾರೆ.

ADVERTISEMENT

'ಬಿಹಾರ ಚುನಾವಣೆಯಲ್ಲಿ ಶೇ 4ಕ್ಕಿಂತ ಕಡಿಮೆ ಮತ ಗಳಿಸುವುದಾಗಿ ಎಂದೂ ನಿರೀಕ್ಷೆ ಮಾಡಿರಲಿಲ್ಲ' ಎಂದು ಅವರು ಹೇಳಿದ್ದಾರೆ.

'ಚುನಾವಣೆಯಲ್ಲಿ ಸ್ಪರ್ಧಿಸದಿರುವ ನನ್ನ ನಿರ್ಧಾರ ತಪ್ಪಾಗಿತ್ತು ಎಂದು ಪರಿಗಣಿಸಬಹುದು. ಪಕ್ಷ ಉತ್ತಮ ಸಾಧನೆ ಮಾಡಲು ಇನ್ನು ಬಹಳಷ್ಟು ಪರಿಶ್ರಮಪಡಬೇಕಿದೆ' ಎಂದು ಹೇಳಿದ್ದಾರೆ.

'ಬಿಹಾರದಲ್ಲಿ ಗೆಲ್ಲದ ಹೊರತು ನಾನು ಹಿಂದೆ ಸರಿಯುವುದಿಲ್ಲ. ಅದಕ್ಕಾಗಿ ಎಷ್ಟು ಸಮಯ ಬೇಕೆಂಬುದು ನನಗೆ ತಿಳಿದಿಲ್ಲ' ಎಂದು ಹೇಳಿದ್ದಾರೆ.

'ವಿಧಾನಸಭಾ ಚುನಾವಣೆಗೂ ಮುನ್ನ ಪ್ರತಿ ಕ್ಷೇತ್ರದ ಆರು ಸಾವಿರ ಫಲಾನುಭವಿಗಳಿಗೆ ₹10 ಸಾವಿರ ನೀಡದಿದ್ದರೆ ಮತ್ತು ಸ್ವ–ಉದ್ಯೋಗ ಯೋಜನೆಯಡಿ 1.5 ಕೋಟಿ ಮ‌‌ಹಿಳೆಯರಿಗೆ ₹2 ಲಕ್ಷ ಆರ್ಥಿಕ ನೆರವು ನೀಡುವ ಭರವಸೆ ನೀಡಿರದಿದ್ದರೆ ಜೆಡಿಯು ಕೇವಲ 25 ಸ್ಥಾನಗಳಿಗೆ ಸೀಮಿತವಾಗುತ್ತಿತ್ತು' ಎಂದು ಜನ ಸುರಾಜ್‌ ಪಕ್ಷದ ನಾಯಕ ಪ್ರಶಾಂತ್‌ ಕಿಶೋರ್‌ ಮಂಗಳವಾರ ಹೇಳಿಕೆ ನೀಡಿದ್ದರು.

ಇತ್ತೀಚೆಗೆ ಅಂತ್ಯಗೊಂಡ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜನ ಸುರಾಜ್ ಪಕ್ಷಕ್ಕೆ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.