ADVERTISEMENT

Live | ಬಿಹಾರದಲ್ಲಿ ಮತ್ತೆ ಬಿಜೆಪಿ–ಜೆಡಿಯು ಮೈತ್ರಿ ಸರ್ಕಾರ; 125 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು

ಬಿಹಾರದ 38 ಜಿಲ್ಲೆಗಳ 55 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಪೂರ್ಣಗೊಂಡಿದೆ. ಸತತ 19 ಗಂಟೆಗಳು ಮತ ಎಣಿಕೆ/ ಫಲಿತಾಂಶ ಸಂಗ್ರಹ ನಡೆದಿರುವುದು ಮತ್ತೊಂದು ವಿಶೇಷ. ಅಂತಿಮವಾಗಿ ಎನ್‌ಡಿಎ ಸ್ಪಷ್ಟ ಬಹುಮತ ದಾಖಲಿಸಿದೆ. ಬಿಹಾರದ ಫಲಿತಾಂಶದ ಇನ್ನಷ್ಟು ಅಪ್‌ಪೇಡ್‌ ಇಲ್ಲಿದೆ ನೋಡಿ.

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 23:23 IST
Last Updated 10 ನವೆಂಬರ್ 2020, 23:23 IST

125 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು

ಬಿಹಾರ ವಿಧಾನಸಭೆ 243 ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟದ ಎನ್‌ಡಿಎ 125 ಕ್ಷೇತ್ರಗಳಲ್ಲಿ ಗೆಲುವು ಪಡೆಯುವ ಮೂಲಕ ಸರ್ಕಾರ ರಚನೆಗೆ ಬಹುಮತ ಗಳಿಸಿದೆ. ಇನ್ನೂ ಆರ್‌ಜೆಡಿ ನೇತೃತ್ವದ ಮಹಾಗಠಬಂಧನ 110 ಸ್ಥಾನಗಳನ್ನಷ್ಟೇ ಗಳಿಸಿದೆ. ಇದರಲ್ಲಿ ಆರ್‌ಜೆಡಿ 75 ಸ್ಥಾನಗಳಲ್ಲಿ ಗೆಲುವು ಪಡೆಯವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಎನ್‌ಡಿಎಗೆ ಸರಳ ಬಹುಮತ

ಬಿಹಾರದ 243 ಕ್ಷೇತ್ರಗಳ ಪೈಕಿ 122 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು ಸಾಧಿಸಿದೆ. ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಮಹಾಘಟಬಂಧನಕ್ಕೆ 109

ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ 229 ಕ್ಷೇತ್ರಗಳ ಫಲಿತಾಂಶ ಪ್ರಕಟ

ಎನ್‌ಡಿಎ: 116, ಮಹಾಗಠಬಂಧನ: 105 

ADVERTISEMENT

ಮಧ್ಯ ಪ್ರದೇಶದಲ್ಲಿ ಎರಡು ಕ್ಷೇತ್ರಗಳನ್ನು ಹೊರತು ಪಡಿಸಿ, ಉಪಚುನಾವಣೆಯ ಎಲ್ಲ ಕ್ಷೇತ್ರಗಳ ಫಲಿತಾಂಶ ಪ್ರಕಟಿಸಲಾಗಿದೆ–ಉಪಚುನಾವಣಾ ಆಯುಕ್ತ ಆಶಿಶ್ ಕುಂದ್ರ

243 ಕ್ಷೇತ್ರಗಳ ಪೈಕಿ 203 ಕ್ಷೇತ್ರಗಳ ಫಲಿತಾಂಶ ಪ್ರಕಟ: ಎನ್‌ಡಿಎಗೆ 102

ಇದು ಬಿಹಾರದ ಭರವಸೆಯ ಗೆಲುವು– ಕೇಂದ್ರ ಗೃಹ ಸಚಿವ ಅಮಿತ್‌ ಶಾ

'ಜಗತ್ತಿಗೆ ಬಿಹಾರದಿಂದ ಪ್ರಜಾಪ್ರಭುತ್ವದ ಮೊದಲ ಪಾಠ...'–ಪ್ರಧಾನಿ ಮೋದಿ ಟ್ವೀಟ್‌

90 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು; ಮಹಾಗಠಬಂಧನಕ್ಕೆ 86 ಕ್ಷೇತ್ರಗಳು

ಮಧ್ಯರಾತ್ರಿ 1ಕ್ಕೆ ಚುನಾವಣಾ ಆಯೋಗದ ಮಾಧ್ಯಮ ಗೋಷ್ಠಿ

ಎನ್‌ಡಿಎ, ಮಹಾಘಟಬಂಧನ್‌ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು ಇತ್ತೀಚಿನ ವರದಿ ಪ್ರಕಾರ ಎನ್‌ಡಿಎ–39( ಗೆಲುವು–83), ಮಹಾಘಟಬಂಧನ– 37(ಗೆಲುವು–76), ಇತರರು–01ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಯಾರ ಒತ್ತಡಕ್ಕೂ ಮಣಿದಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ

ಶೇ 4ರಷ್ಟು ಮತಗಳ ಎಣಿಕೆ ಬಾಕಿ ಇದ್ದು ಮಧ್ಯರಾತ್ರಿ ಫಲಿತಾಂಶ ಪ್ರಕಟವಾಗುವುದು ಎಂದು ಚುನಾವಣೆ ಆಯೋಗ ತಿಳಿಸಿದೆ. ಇಲ್ಲಿಯರೆಗೂ 146 ಕ್ಷೇತ್ರಗಳ ಫಲಿತಾಂಶ ಬಂದಿದೆ ಎಂದು ಆರೋಗ ತಿಳಿಸಿದೆ.

ಮತ ಎಣಿಕೆ ಮೇಲೆ ನಿತೀಶ್ ಕುಮಾರ್ ಪ್ರಭಾವ: ಆರ್‌ಜೆಡಿ, ಕಾಂಗ್ರೆಸ್ ಆರೋಪ

ಬಿಹಾರದಲ್ಲಿ ಖಾತೆ ತೆರೆದ ಬಿಎಸ್‌ಪಿ

ಸದ್ಯದ ಟ್ರೆಂಡ್‌: ಎನ್‌ಡಿಎ–126, ಮಹಾಘಟಬಂಧನ–110, ಇತರೆ–07ರಲ್ಲಿ ಮುನ್ನಡೆ

ಮಹಾ ಗಠಬಂಧನದ ಚುಕ್ಕಾಣಿ ಹಿಡಿದ ಯುವ ನಾಯಕ ತೇಜಸ್ವಿ ಯಾದವ್

ಬಿಹಾರ ಚುನಾವಣಾ ಫಲಿತಾಂಶ: ತೇಜಸ್ವಿ, ತೇಜ್‌ಪ್ರತಾಪ್, ಚಿರಾಗ್ ಒಡ್ಡಿದ ಸವಾಲು

ಎನ್‌ಡಿಎ, ಮಹಾಘಟಬಂಧನ್‌ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು ಇತ್ತೀಚಿನ ವರದಿ ಪ್ರಕಾರ ಎನ್‌ಡಿಎ–121, ಮಹಾಘಟಬಂಧನ–114, ಇತರರಯ–08ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ದೊಡ್ಡ ಪಕ್ಷವಾಗಿ ಮುನ್ನಡೆಯುತ್ತಿರುವ ಆರ್‌ಜೆಡಿ

ಅತಿ ದೊಡ್ಡ ಪಕ್ಷವಾಗಿ ಆರ್‌ಜೆಡಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 73, ಆರ್‌ಜೆಡಿ 75 ಹಾಗೂ ಜೆಡಿಯು 43ರಲ್ಲಿ ಮುನ್ನಡೆ ಕಾಯ್ದುಕೊಂಡಿವೆ

ಸದ್ಯದ ಟ್ರೆಂಡ್‌: ಎನ್‌ಡಿಎ–123, ಮಹಾಘಟಬಂಧನ–112, ಇತರೆ–08ರಲ್ಲಿ ಮುನ್ನಡೆ

ಬಿಹಾರ ಚುನಾವಣಾ ಫಲಿತಾಂಶ: ಮಹಾಘಟಬಂಧನವೇ ಸರ್ಕಾರ ರಚಿಸಲಿದೆ ಎಂದ ಆರ್‌ಜೆಡಿ

ಸದ್ಯದ ಟ್ರೆಂಡ್‌: ಎನ್‌ಡಿಎ–126, ಮಹಾಘಟಬಂಧನ–107, ಇತರೆ–10ರಲ್ಲಿ ಮುನ್ನಡೆ

ಬಿಹಾರದಲ್ಲಿ ಎನ್‌ಡಿಎಗೆ ಮುನ್ನಡೆ ಹಿನ್ನೆಲೆಯಲ್ಲಿ ದೆಹಲಿ ಬಿಜೆಪಿ ಕಚೇರಿ ಮುಂದೆ ಕಾರ್ಯಕರ್ತರ ಸಂಭ್ರಮ

ಸದ್ಯದ ಟ್ರೆಂಡ್‌: ಎನ್‌ಡಿಎ–129, ಮಹಾಘಟಬಂಧನ–103, ಎಲ್‌ಜೆಪಿ–01, ಇತರೆ–11

‘ಎನ್‌ಡಿಎ‘ನಲ್ಲಿ ಮಂದಹಾಸ, ‘ಮಹಾಘಟಬಂಧನ‘ದಲ್ಲಿ ನಿರುತ್ಸಾಹ

ಈ ಬಾರಿ ಶೇ 63ರಷ್ಟು ಎಲೆಕ್ಟ್ರಾನಿಕ್ ಮತ ಯಂತ್ರಗಳ ಸಂಖ್ಯೆ ಏರಿಕೆಯಾದ ಕಾರಣ, ಇಂದು (ಮಂಗಳವಾರ) ತಡರಾತ್ರಿಯವರೆಗೂ ಮತ ಎಣಿಕೆ ಕಾರ್ಯ ಮುಂದುವರಿಯಲಿದೆ

ಸದ್ಯದ ಟ್ರೆಂಡ್‌: ಎನ್‌ಡಿಎ–128, ಮಹಾಘಟಬಂಧನ–105, ಎಲ್‌ಜೆಪಿ–02, ಇತರೆ–08

ಪಟ್ನಾ: ಬಿಜೆಪಿ ಮಹಿಳಾ ಕಾರ್ಯಕರ್ತೆಯರಿಂದ ಪಕ್ಷದ ಕಚೇರಿಯಲ್ಲಿ ಸಂಭ್ರಮ

ಬಿಹಾರದಲ್ಲಿ ಎನ್‌ಡಿಎ ಸರ್ಕಾರ, ನಿತೀಶ್ ಮುಖ್ಯಮಂತ್ರಿ: ಜೆಡಿಯು ವಿಶ್ವಾಸ

ರಾಷ್ಟ್ರದ ರಾಜಕೀಯ ಮನಸ್ಥಿತಿ ಬಿಂಬಿಸಲಿರುವ ಉಪಚುನಾವಣಾ ಫಲಿತಾಂಶ

ಇಲ್ಲಿಯವರೆಗಿನ ಪಕ್ಷಗಳ ಬಲಾಬಲದ ಮಾಹಿತಿ

ಎನ್‌ಡಿಎ: 124
ಮಹಾಘಟಬಂಧನ್‌: 106
ಎಲ್‌ಜೆಪಿ: 02
ಇತರೆ: 11

ಚುನಾವಣಾ ಆಯೋಗದಿಂದ ಸುದ್ದಿಗೋಷ್ಠಿ

ಮತ ಎಣಿಕೆಯು ತಡರಾತ್ರಿವರೆಗೂ ಮುಂದುವರಿಯಲಿದೆ. ಈವರೆಗೆ ಒಂದು ಕೋಟಿ ಮತಗಳನ್ನು ಎಣಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಬಿಹಾರ ಚುನಾವಣೆಯಲ್ಲಿ 2015ಕ್ಕಿಂತ ಈ ಸಲ ಶೇಕಡಾ 63ರಷ್ಟು ಹೆಚ್ಚುಇವಿಎಂಗಳಿರುವ ಕಾರಣ ಮತ ಎಣಿಕೆಗೆ ಹೆಚ್ಚಿನ ಅವಧಿ ಅಗತ್ಯವಿದೆ ಕೋವಿಡ್‌ ಕಾರಣದಿಂದಾಗಿ ಈ ಬಾರಿ ಹೆಚ್ಚು ಮತಗಟ್ಟೆಗಳನ್ನು ನಿರ್ಮಿಸಲಾಗಿತ್ತು.

ಎಡಪಕ್ಷಗಳಿಗೆ ಮತ್ತಷ್ಟು ಬಲ, 20 ಕ್ಷೇತ್ರಗಳಲ್ಲಿ ಮುನ್ನಡೆ

ಏಕೈಕ ಅತಿದೊಡ್ಡ ಪಕ್ಷವಾಗುವತ್ತ ಬಿಜೆಪಿ

ಬಿಹಾರದಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗುವತ್ತ ಬಿಜೆಪಿ ಸಾಗಿದೆ. 74 ಸ್ಥಾನಗಳಲ್ಲಿ ಬಿಜೆಪಿ ಮುನ್ನೆಡೆ ಸಾಧಿಸಿದ್ದು, 62 ಸ್ಥಾನಗಳಲ್ಲಿ ಮುನ್ನೆಡೆ ಹೊಂದುವ ಮೂಲಕ ಆರ್‌ಜೆಡಿ ಎರಡನೇ ಸ್ಥಾನದಲ್ಲಿದೆ

ಅಧಿಕಾರಕ್ಕಾಗಿ ಎನ್‌ಡಿಎ ಏನು ಬೇಕಾದ್ರೂ ಮಾಡುತ್ತೆ: ಲವ್ ಸಿನ್ಹಾ

'ಸ್ವಂತ ಸಾಮರ್ಥ್ಯದಿಂದ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೆ, ಅಧಿಕಾರಕ್ಕೆ ಬರಲು ಎನ್‌ಡಿಎ ಏನು ಬೇಕಾದರೂ ಮಾಡುತ್ತೆ' ಎಂದು ಕಾಂಗ್ರೆಸ್ ನಾಯಕ ಲವ್ ಸಿನ್ಹಾ ಟ್ವೀಟ್ ಮಾಡಿದ್ದಾರೆ.

'ಸರ್ಕಾರ ರಚಿಸಲು ಏನು ಮಾಡಿದರೂ ಸರಿ ಎಂಬ ಹಳೆಯ ಕಾರ್ಯಕರ್ತವನ್ನು ಬಿಜೆಪಿ ಕರಗತ ಮಾಡಿಕೊಂಡಿದೆ' ಎಂದು ಅವರು ಟೀಕಿಸಿದ್ದಾರೆ.

'ಈಗ ನಾವು ಅತ್ಯಂತ ಎಚ್ಚರದಿಂದ ಎಲ್ಲವನ್ನೂ ಗಮನಿಸುತ್ತಿರಬೇಕು' ಎಂಬ ತಮ್ಮ ತಂದೆ ಶತ್ರುಘ್ನ ಸಿನ್ಹಾ ಅವರ ಟ್ವೀಟ್‌ ಅನ್ನು ಲವ್ ಸಿನ್ಹಾ ರಿಟ್ವೀಟ್ ಮಾಡಿಕೊಂಡಿದ್ದಾರೆ.

ಮತ ಎಣಿಕೆ ತಡವಾಗುತ್ತಿದೆ ಏಕೆ?

ಮಧ್ಯಾಹ್ನ 12.15ರ ಅವಧಿಯ ಮತ ಎಣಿಕೆ ಮಾಹಿತಿಯು ಎನ್‌ಡಿಎ ಮುನ್ನಡೆ ಸಾಧ್ಯತೆಯನ್ನು ಸಾರಿ ಹೇಳುತ್ತಿವೆ. ಹಲವು ಕ್ಷೇತ್ರಗಳಲ್ಲಿ ಎನ್‌ಡಿಎ ಮತ್ತು ಮಹಾಘಟಬಂಧನ್ ಅಭ್ಯರ್ಥಿಗಳ ಮತಗಳಿಕೆ ಪ್ರಮಾಣದ ಅಂತರವೂ ಹೆಚ್ಚಾಗುತ್ತಿದೆ. ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದ್ದರೆ, ಪ್ರತಿಪಕ್ಷಗಳು 'ಕಾದು ನೋಡಿ' ಎನ್ನುತ್ತಿವೆ.

ಈ ಬಾರಿ ಬಿಹಾರದಲ್ಲಿ ಮತ ಎಣಿಕೆ ತಡವಾಗುತ್ತಿದೆ. ಇದಕ್ಕೆ ಕೋವಿಡ್ ಕಾರಣ ಎಂದು ಹಲವರು ಹೇಳುತ್ತಿದ್ದಾರೆ. ಅದು ನಿಜವೂ ಹೌದು.

ಪ್ರತಿ ಮತಗಟ್ಟೆಗೆ ಒಟ್ಟು ಮತದಾರರ ಸಂಖ್ಯೆಯನ್ನು ಚುನಾವಣಾ ಆಯೋಗವು 1000ದಿಂದ 1500ಕ್ಕೆ ಮಿತಿಗೊಳಿಸಿತ್ತು. ಹೀಗಾಗಿ ರಾಜ್ಯದಲ್ಲಿ ಸ್ಥಾಪಿಸಿದ್ದ ಮತಗಟ್ಟೆಗಳ ಸಂಖ್ಯೆಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾದವು.

ಕಳೆದ ಬಾರಿ 62,780 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಬಾರಿ ಮತಗಟ್ಟೆಗಳ ಸಂಖ್ಯೆ 1.6 ಲಕ್ಷಕ್ಕೂ ಹೆಚ್ಚಾಗಿತ್ತು.

ಈವರೆಗೆ ಎಣಿಕೆಯಾದ ಮತಗಳ ಹಂಚಿಕೆ ವಿವರ

ಚುನಾವಣಾ ಆಯೋಗವು ಪ್ರಕಟಿಸಿರುವ ಈವರೆಗಿನ ಮತ ಎಣಿಕೆ ಮಾಹಿತಿ ಪ್ರಕಾರ ಆರ್‌ಜೆಡಿ ಗರಿಷ್ಠ ಪ್ರಮಾಣದ (ಶೇ 23.35) ಮತ ತನ್ನದಾಗಿಸಿಕೊಂಡಿದೆ. ಬಿಜೆಪಿ ಶೇ 20), ಜೆಡಿಯು ಶೇ 15.46, ಕಾಂಗ್ರೆಸ್ ಶೇ 9.05, ಎಲ್‌ಜೆಪಿ ಶೇ 6.24ರಷ್ಟು ಮತಗಳನ್ನು ಪಡೆದುಕೊಂಡಿವೆ.

ನಿಧಾನಗತಿಯಲ್ಲಿ ಮತ ಎಣಿಕೆ

ಕೋವಿಡ್ ಕಾರಣಕ್ಕೆ ಬಿಹಾರದಲ್ಲಿ ಮತಗಟ್ಟೆಗಳ ಸಂಖ್ಯೆಯಲ್ಲಿ ಹೆಚ್ಚಿಸಲಾಗಿತ್ತು. ಈ ಬಾರಿಯ ಮತ ಎಣಿಕೆಯ ಮೇಲೆ ಇದು ಪರಿಣಾಮ ಬೀರಿದೆ. ಈವರೆಗೆ ಕೇವಲ ಶೇ 11ರಷ್ಟು ಮತ ಎಣಿಕೆ ಪೂರ್ಣಗೊಂಡಿದೆ.

ಈವರೆಗಿನ ಮಾಹಿತಿ ಪ್ರಕಾರ ಎನ್‌ಡಿಎ ಮುನ್ನಡೆ ಸಾಧಿಸಿದೆ.

ಶೆಲ್ಖಾಪುರ, ಸುಗೌಳಿ, ನೊಕಾ, ಇಸ್ಲಾಂಪುರ ಕ್ಷೇತ್ರಗಳಲ್ಲಿ ಮುನ್ನಡೆಯ ಅಂತರ ಕೇವಲ 100 ಮತಗಳು. ಏಕ್ಮಾ, ಬಾಜ್‌ಪತ್ತಿ, ಬೆಳಗಂಜ್, ಆರ್ರಾ, ಮಧುಬನಿ, ಬರೌಲಿ ಕ್ಷೇತ್ರಗಳಲ್ಲಿ ಮುನ್ನಡೆಯ ಅಂತರ 200 ಮತಗಳು.

1.30ಕ್ಕೆ ಚುನಾವಣಾ ಆಯೋಗ ಪತ್ರಿಕಾಗೋಷ್ಠಿ

ಚುನಾವಣಾ ಆಯೋಗವು ಮಧ್ಯಾಹ್ನ 1.30ಕ್ಕೆ ವರ್ಚುವಲ್ ಪತ್ರಿಕಾಗೋಷ್ಠಿ ನಡೆಸಲಿದೆ. ಉಪ ಚುನಾವಣಾ ಆಯುಕ್ತ ಸುದೀಪ್ ಜೈನ್ ಮತ್ತು ಆಯೋಗದ ಹಿರಿಯ ಅಧಿಕಾರಿಗಳಾದ ಚಂದ್ರಭೂಷಣ್ ಕುಮಾರ್ ಮತ್ತು ಆಶೀಶ್ ಕುಂದ್ರಾ ಚುನಾವಣಾ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಿತನ್‌ ರಾಮ್‌ ಮಾಂಝಿ ಹಿನ್ನಡೆ

ಇಮಾಮ್‌ಗಂಜ್ ಕ್ಷೇತ್ರದಲ್ಲಿ ಹಿಂದೂಸ್ತಾನಿ ಅವಾಮಿ ಮೋರ್ಚಾ ಅಧ್ಯಕ್ಷ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್‌ ರಾಮ್‌ ಮಾಂಝಿ ಅವರಿಗೆ ಹಿನ್ನಡೆಯಾಗಿದೆ. ಪ್ರತಿಸ್ಪರ್ಧಿ ಆರ್‌ಜೆಡಿಯ ಉದಯ್‌ ನಾರಾಯಣ್ ಚೌಧರಿ ಮುನ್ನಡೆ ಸಾಧಿಸಿದ್ದಾರೆ.

130ರ ಸನಿಹಕ್ಕೆ ತಲುಪಿದ ಎನ್‌ಡಿಎ ಮುನ್ನಡೆ

ಮಧ್ಯಾಹ್ನ 12 ಗಂಟೆ ವೇಳೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಸ್ಪರ್ಧಿಸಿದ್ದ ಎನ್‌ಡಿಎ ಮೈತ್ರಿಕೂಟ 129 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದೆ.

ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ 99 ಕ್ಷೇತ್ರಗಳಲ್ಲಿ ಮತ್ತು ಎಲ್‌ಜೆಪಿ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತರರು 9 ಕ್ಷೇತ್ರಗಳಲ್ಲಿ ಮುಂದಿದ್ದಾರೆ.

ಮುನ್ನಡೆ ವಿವರ: ಬಿಜೆಪಿ 74, ಜೆಡಿಯು 48, ಆರ್‌ಜೆಡಿ 59, ಕಾಂಗ್ರೆಸ್ 21, ಎಲ್‌ಜೆಪಿ 5, ಇತರರು 10.

ಎನ್‌ಡಿಎಗೆ ಬಹುಮತ: ಕಾದು ನೋಡಿ ಎಂದ ಆರ್‌ಜೆಡಿ

ಪಟ್ನಾ ನಗರದ ಬಿಜೆಪಿ ಕಚೇರಿ ಎದುರು ಕಾರ್ಯಕರ್ತರು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಆದರೆ ವಿರೋಧ ಪಕ್ಷಗಳ ನಾಯಕರು 'ಫಲಿತಾಂಶ ಪ್ರಕಟವಾಗಲು ಇನ್ನೂ ಸಮಯವಿದೆ. ಕಾದುನೋಡಿ' ಎಂದು ಕಿವಿಮಾತು ಹೇಳಿದ್ದಾರೆ.

ಆರಂಭದಲ್ಲಿ ಸಾಧಿಸಿದ್ದ ಮುನ್ನಡೆ ಕಾಪಾಡಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ. ಸ್ಪರ್ಧಿಸಿದ್ದ 70 ಕ್ಷೇತ್ರಗಳ ಪೈಕಿ ಕೇವಲ 20 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

ಎಡಪಕ್ಷಗಳು ನಿರೀಕ್ಷೆಗೂ ಮೀರಿದ ಸಾಧನೆ ತೋರಿವೆ. ಸ್ಪರ್ಧಿಸಿದ್ದ 15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. 

90 ಕ್ಷೇತ್ರಗಳಲ್ಲಿ ಗೆಲುವಿನ ಭರವಸೆ ಹುಟ್ಟಿಸಿದ್ದ ಆರ್‌ಜೆಡಿ ಕೇವಲ 65 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಮುನ್ನಡೆ-ಹಿನ್ನಡೆಯನ್ನೇ ಆಧರಿಸಿ ಚುನಾವಣಾ ಫಲಿತಾಂಶ ನಿರ್ಧರಿಸಲು ಆಗುವುದಿಲ್ಲ ಮತ ಎಣಿಕೆ ನಿಧಾನಗತಿಯಲ್ಲಿ ಸಾಗುತ್ತಿದೆ. ಕೋವಿಡ್ ಕಾರಣದಿಂದಾಗಿ ಚುನಾವಣಾ ಆಯೋಗವು ಮತಗಟ್ಟೆಗಳ ಸಂಖ್ಯೆಯನ್ನೂ ಹೆಚ್ಚಿಸಿತ್ತು. ಗ್ರಾಮೀಣ ಪ್ರದೇಶಗಳ ಮತ ಎಣಿಕೆ ಆರಂಭವಾದ ನಂತರ ಚಿತ್ರಣ ಬದಲಾಗಲಿದೆ ಎಂದು ವಿರೋಧ ಪಕ್ಷಗಳ ನಾಯಕರು ಹೇಳಿದ್ದಾರೆ.

ನಿತೀಶ್ ಮುನ್ನಡೆ: ಜೆಡಿಯು ಸಂಭ್ರಮ

ನಿತೀಶ್‌ ಕುಮಾರ್ ಅವರ ಮುನ್ನಡೆ ಖಾತ್ರಿಯಾಗುತ್ತಿದ್ದಂತೆ ಪಟ್ನಾದಲ್ಲಿ ಜೆಡಿಯು ಬೆಂಬಲಿಗರು ಸಂಭ್ರಮಿಸಿದರು.

ಬಿಜೆಪಿ ಸಂಭ್ರಮಾಚರಣೆ

ಬಿಹಾರದಲ್ಲಿ ಬಿಜೆಪಿ ಸಂಭ್ರಮಾಚರಣೆ. ಬಿಜೆಪಿ ಪಟ್ನಾ ಕಚೇರಿಯಲ್ಲಿ ಡೋಲು ಬಾರಿಸಿ ಸಂಭ್ರಮಿಸುತ್ತಿರುವ ಬಿಜೆಪಿ ಕಾರ್ಯಕರ್ತರು.

ಶತ್ರುಘ್ನ ಸಿನ್ಹಾ ಮಗ, ಕಾಂಗ್ರೆಸ್‌ನ ಲವ್‌ ಸಿನ್ಹಾ ಮುನ್ನಡೆ

ಬಂಕಿಪುರ ಕ್ಷೇತ್ರದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಶತ್ರುಘ್ನಸಿನ್ಹಾ ಅವರ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ಲವ್‌ ಸಿನ್ಹಾ, ಬಿಜೆಪಿಯ ನಿತಿನ್ ನಬಿನ್ ಅವರ ವಿರುದ್ಧ 1,200 ಮತಗಳ ಮುನ್ನಡೆ ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಪ್ಲೂರಲ್ಸ್‌ ಪಾರ್ಟಿಯ ಮುಖ್ಯಸ್ಥೆ ಪುಷ್ಪಂ ಪ್ರಿಯಾ ಚೌಧರಿ 121 ಮತಗಳನ್ನು ಪಡೆದಿದ್ದಾರೆ.

ಮೊದಲ ಬಾರಿಗೆ ಚುನಾವಣೆಯ ಕಣಕ್ಕಿಳಿಯುತ್ತಿರುವ ನೀವು, ಬಿಹಾರದಲ್ಲಿ ಆರ್‌ಜೆಡಿ ಪ್ರಬಲ ಪಕ್ಷವಾಗಿದ್ದರೂ, ಕಾಂಗ್ರೆಸ್‌ ಪಕ್ಷವನ್ನೇ  ಏಕೆ ಆಯ್ಕೆ ಮಾಡಿಕೊಂಡಿರಿ ಎಂಬ ಪ್ರಶ್ನೆಗೆ ಉತ್ತರಿಸಿದ 37ರ ಹರೆಯದ ಲವ್‌ ಸಿನ್ಹಾ, ‘ನಾನು ಕಾಂಗ್ರೆಸ್‌ ಆಯ್ಕೆ ಮಾಡಿಕೊಂಡಿಕೊಡಿಲ್ಲ, ಆ ಪಕ್ಷವೇ ನನ್ನನ್ನು ಆಯ್ಕೆ ಮಾಡಿಕೊಂಡಿದೆ‘ ಎಂದು ಹೇಳಿದ್ದಾರೆ.

ಹಯಘಾಟ್ ಕ್ಷೇತ್ರ: ಬಿಜೆಪಿ ಮುನ್ನಡೆ

ಹಯಘಾಟ್ ಕ್ಷೇತ್ರದಲ್ಲಿ ಆರ್‌ಜೆಡಿ ಅಭ್ಯರ್ಥಿ ಭೋಲಾಯಾದವ್ ವಿರುದ್ಧ ಬಿಜೆಪಿ ಅಭ್ಯರ್ಥಿ ರಾಮಚಂದ್ರಪ್ರಸಾದ್ 1878 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಸ್ಪೀಕರ್ ವಿಜಯ್ ‌ಕುಮಾರ್ ಚೌಧರಿ ಹಿನ್ನಡೆ

ಸರಜಂಜನ್‌ ಕ್ಷೇತ್ರದಲ್ಲಿ ಆರ್‌ಜೆಡಿ ಅಭ್ಯರ್ಥಿ ಅರವಿಂದ ಕುಮಾರ್ ಸಾಹ್ನಿ 230 ಮತಗಳಿಂದ ಮುನ್ನಡೆ. ಬಿಹಾರ ವಿಧಾನಸಭಾ ಸ್ಪೀಕರ್ ಮತ್ತು ಜೆಡಿಯು ಅಭ್ಯರ್ಥಿ ವಿಜಯ್ ಕುಮಾರ್ ಚೌಧರಿ ಹಿನ್ನಡೆ.

ಜಮೈ ಕ್ಷೇತ್ರ: ಬಿಜೆಪಿ ಮುನ್ನಡೆ

ಜಮೈ ಕ್ಷೇತ್ರದಲ್ಲಿ ಬಿಜೆಪಿಯ ಶ್ರೇಯಸಿ ಸಿಂಗ್‌ ಅವರು, ಪಕ್ಷೇತರ ಅಭ್ಯರ್ಥಿ ಸುಜಾತಾ ಸಿಂಗ್ ವಿರುದ್ಧ 3187 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಬಕ್ಸಾರ್ ಸದರ್ ಕ್ಷೇತ್ರ: ಬಿಜೆಪಿ ಮುನ್ನಡೆ

ಬಕ್ಸಾರ್ ಸದರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪರಶುರಾಮ್‌ ಚತುರ್ವೇದಿ ಅವರು 2366 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಲವ್ ಸಿನ್ಹಾ ಹಿನ್ನಡೆ

ಬಂಕಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಲವ್‌ ಸಿನ್ಹಾ, ಪ್ರತಿಸ್ಪರ್ಧಿ ಬಿಜೆಪಿಯ ನಿತಿನ್ ನಬಿನ್ ಅವರಿಗಿಂತ 1,288 ಮತಗಳಿಂದ ಹಿಂದೆ ಇದ್ದಾರೆ.

ಬಹುಮತದತ್ತ ಎನ್‌ಡಿಎ: ಚಿರಾಗ್ ಆಗ್ತಾರಾ ಕಿಂಗ್ ಮೇಕರ್?

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆಯುವತ್ತ ದಾಪುಗಾಲು ಇರಿಸಿದ್ದು, ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಕಂಡು ಬಂದಿದೆ.

ಆದರೆ ಮುಖ್ಯಮಂತ್ರಿ ನಿತೀಶ್‌ ಕುಮಾರ್ ನೇತೃತ್ವದ ಜೆಡಿಯು ಸಾಧನೆ ಕಳಪೆಯಾಗಿದೆ.

ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ 8 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದೆ. ಒಂದು ವೇಳೆ ಅತಂತ್ರ ವಿಧಾನಸಭೆ ರೂಪುಗೊಂಡು, ಚಿರಾಗ್‌ ಅವರ ಪಕ್ಷ ಈ 8 ಸ್ಥಾನಗಳನ್ನು ದಕ್ಕಿಸಿಕೊಂಡರೆ, ಹೊಸ ರಾಜಕೀಯ ಲೆಕ್ಕಾಚಾರಗಳು ಚಾಲ್ತಿಗೆ ಬರಬಹುದು.

ಎನ್‌ಡಿಎ ಮೈತ್ರಿಯಿಂದ ಕೊನೆ ಗಳಿಗೆಯಲ್ಲಿ ಹೊರಬಿದ್ದ ಚಿರಾಗ್‌ನ ಭವಿಷ್ಯಕ್ಕೂ ಇದು ಚಿಮ್ಮುಹಲಗೆ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

11.20ರ ಸಮಯದಲ್ಲಿ ಎನ್‌ಡಿಎ 129, ಮಹಾಘಟಬಂಧನ್ 103, ಎಲ್‌ಜೆಪಿ 5 ಮತ್ತು ಇತರರು 6 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದ್ದರು.

ಪೂರ್ಣ ಮತ ಎಣಿಕೆ ಇನ್ನೂ ಮುಗಿದಿಲ್ಲ. ಅಂತಿಮ ಫಲಿತಾಂಶ ಪ್ರಕಟವಾದ ನಂತರವೇ ಯಾರಿಗೆ ಮತದಾರರ ಆಶೀರ್ವಾದ ಸಿಕ್ಕಿದೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ.

ಜೆಡಿಯು ನಾಯಕ ಸುನಿಲ್‌ಕುಮಾರ್ ಮುನ್ನಡೆ

ವಾಲ್ಮೀಕಿ ನಗರ್‌ ಕ್ಷೇತ್ರದಲ್ಲಿ ಜೆಡಿಯುನ ಸುನಿಲ್‌ಕುಮಾರ್‌ ಅವರು ಕಾಂಗ್ರೆಸ್‌ನ ಪ್ರವೇಶ್‌ ಕುಮಾರ್‌ಮಿಶ್ರಾ ಅವರಿಗಿಂತ 2,500 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಕಾಂಗ್ರೆಸ್ ನಾಯಕ ಶರದ್ ಯಾದವ್ ಪುತ್ರಿ ಸುಭಾಷಿನಿ ಹಿನ್ನಡೆ

ಬಿಹಾರ್‌ಗಂಜ್‌ ಕ್ಷೇತ್ರದಲ್ಲಿ ಶರದ್ ಯಾದವ್ ಅವರ ಪುತ್ರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸುಭಾಷಿನಿ ಅವರು 1,271 ಮತಗಳಿಂದ  ಹಿಂದುಳಿದಿದ್ದಾರೆ. ಜೆಡಿಯು ನಾಯಕ ನಿರಂಜನ್ ಕುಮಾರ್ ಮೆಹ್ತಾ ಮುನ್ನಡೆ ಸಾಧಿಸುತ್ತಿದ್ದಾರೆ

ಮಾಜಿ ಮುಖ್ಯಮಂತ್ರಿ ಜೀತನ್‌ ರಾಂ ಮಾಂಝಿ ಹಿನ್ನಡೆ

ಬಿಹಾರದ ಇಮಾಂಗಜ್‌ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಜೀತನ್‌ ರಾಂ ಮಾಂಝಿ ಅವರು ಹಿನ್ನಡೆಯಲ್ಲಿದ್ದು ಅವರ ಪ್ರತಿಸ್ಪರ್ಧಿ ಆರ್‌ಜೆಡಿಯ ಉದಯ ನಾರಾಯಣ್‌ ಚೌಧರಿ ಅವರು 1,340 ಮತಗಳಿಂದ ಮುಂದಿದ್ದಾರೆ.

ಉತ್ತರ ಬಿಹಾರದಲ್ಲಿ ಎನ್‌ಡಿಎ ಮುನ್ನಡೆ

ಬಿಹಾರದಲ್ಲಿ ಸದ್ಯದ ಮುನ್ನಡೆ-ಹಿನ್ನಡೆ ಮಾಹಿತಿ ಗಮನಿಸಿದಾಗ ಎನ್‌ಡಿಎ ಬಹುಮತ ಪಡೆಯುವ ಸಾಧ್ಯತೆಗಳು ಗೋಚರಿಸುತ್ತಿವೆ.

11 ಗಂಟೆ ಅವಧಿಯಲ್ಲಿ ಎನ್‌ಡಿಎ 130 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಮಹಾಘಟಬಂಧನ್ 99 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಎಲ್‌ಜೆಪಿ 5, ಇತರರು 9 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದ್ದರು.

3ನೇ ಹಂತದಲ್ಲಿ ಮತದಾನವಾದ ಉತ್ತರ ಬಿಹಾರದಲ್ಲಿ ಎನ್‌ಡಿಎ ಅಭ್ಯರ್ಥಿಗಳ ಸಾಧನೆ ಉತ್ತಮವಾಗಿದೆ. ಮೊದಲ ಮತ್ತು 2ನೇ ಹಂತದಲ್ಲಿ ಮತದಾನ ನಡೆದ ಮಗಧ ಮತ್ತು ಭೋಜಪುರ ಪ್ರದೇಶದಲ್ಲಿ ಮಹಾಘಟಬಂಧನತ್ತ ಜನರ ಒಲವು ವ್ಯಕ್ತವಾದಂತೆ ಇದೆ.

ತೇಜಸ್ವಿ ಯಾದವ್ ಮುನ್ನಡೆ

ರಾಘೋಪುರ್ ಕ್ಷೇತ್ರದಲ್ಲಿ 455 ಮತಗಳಿಂದ ತೇಜಸ್ವಿ ಯಾದವ್ ಮುನ್ನಡೆ. ಬಿಜೆಪಿಯ ಸತೀಶ್‌ ಕುಮಾರ್ 2ನೇ ಸ್ಥಾನದಲ್ಲಿದ್ದಾರೆ.

ಪುಟಿದೆದ್ದ ಎನ್‌ಡಿಎ, ಹಿಂದುಳಿದ ಮಹಾಘಟಬಂಧನ್ 

ಬಿಹಾರ ಮತ ಎಣಿಕೆ ಚುರುಕಾಗುತ್ತಿದ್ದಂತೆ ಎನ್‌ಡಿಎ ಮುನ್ನಡೆ ಸಾಧಿಸುವ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ.

10.50ರ ಅವಧಿಯಲ್ಲಿ ಒಟ್ಟು 126 ಕ್ಷೇತ್ರಗಳಲ್ಲಿ ಎನ್‌ಡಿಎ, 101 ಕ್ಷೇತ್ರಗಳಲ್ಲಿ ಮಹಾಘಟಬಂಧನ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರು.

ಮುಂಜಾನೆ ಅಂಚೆ ಮತ ಎಣಿಕೆ ಆರಂಭವಾದ ಕ್ಷಣದಿಂದ ಮುನ್ನಡೆ ಕಾಯ್ದುಕೊಂಡಿದ್ದ ಮಹಾಘಟಬಂಧನ್ ಇದೀಗ ಹಿಂದಕ್ಕೆ ಸರಿದಿದೆ. ಬಿಹಾರದಲ್ಲಿ ಅಧಿಕಾರ ಹಿಡಿಯಲು ಬೇಕಿರುವ ಮ್ಯಾಜಿಕ್ ನಂಬರ್‌ 122ರ ಗಡಿಯನ್ನು ಎನ್‌ಡಿಎ ದಾಟಿದೆ.

ಮತ ಎಣಿಕೆ ಪೂರ್ಣಗೊಳ್ಳಲು ಇನ್ನೂ ಕೆಲ ಸಮಯ ಬೇಕಿದ್ದು, ಅಂತಿಮ ಫಲಿತಾಂಶ ಏನು ಬೇಕಾದರೂ ಆಗಿರಬಹುದು.

ಸೋಲಿಗೆ ಕೋವಿಡ್ ಕಾರಣ ಎಂದ ನಿತೀಶ್‌ ಪಕ್ಷದ ವಕ್ತಾರ

ಮತ ಎಣಿಕೆ ಮುಗಿಯುವ ಮೊದಲೇ ಬಿಹಾರದ ಆಡಳಿತಾರೂಢ ಜೆಡಿಯು ಪಕ್ಷದ ವಕ್ತಾರ ಕೆ.ಸಿ.ತ್ಯಾಗಿ ಸೋಲೊಪ್ಪಿಕೊಂಡು ಹೇಳಿಕೆ ನೀಡಿದ್ದಾರೆ.

'ನಾವು ಜನರ ನಿರ್ಧಾರ ಸ್ವಾಗತಿಸುತ್ತೇವೆ. ನಾವು ತೇಜಸ್ವಿ ಯಾದವ್ ಅಥವಾ ಆರ್‌ಜೆಡಿಯಿಂದ ಸೋಲಲಿಲ್ಲ. ಆದರೆ ದೇಶಕ್ಕೆ ಅಂಟಿದ ಶಾಪದಿಂದ (ಕೋವಿಡ್) ಸೋತೆವು' ಎಂದು ಎನ್‌ಡಿಟಿವಿ ಸುದ್ದಿವಾಹಿನಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

'ಬಿಹಾರದಲ್ಲಿ ಕಳೆದ 70 ವರ್ಷಗಳಿಂದ ಏನೆಲ್ಲಾ ಆಗಿತ್ತೋ ಅದಕ್ಕೆ ನಾವು ಬೆಲೆ ತೆತ್ತಿದ್ದೇವೆ. ಕೋವಿಡ್ ಕಾರಣದಿಂದ ನಾವು ಹಿನ್ನಡೆ ಅನುಭವಿಸುತ್ತಿದ್ದೇವೆ' ಅವರು ಹೇಳಿದ್ದಾರೆ.

ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಹಿನ್ನಡೆ

ಹಸನ್‌ಪುರ್ ಕ್ಷೇತ್ರದಲ್ಲಿ ಆರ್‌ಜೆಡಿ ನಾಯಕ ತೇಜ್‌ ಪ್ರತಾಪ್ ಯಾದವ್ ಹಿನ್ನಡೆ. ಜೆಡಿಯುನ ರಾಜ್‌ಕುಮಾರ್‌ ರೇ 1365 ಮತಗಳಿಂದ ಮುನ್ನಡೆ.

ಹಾಲಿ ಸಚಿವಗೆ ಹಿನ್ನಡೆ

ಬಿಹಾರದ ಪಟ್ನಾ ಸಾಹಿಬ್ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಮತ್ತು ಹಾಲಿ ಸಚಿವ ನಂದ ಕಿಶೋರ್ ಯಾದವ್ ಹಿನ್ನಡೆ. ಕಾಂಗ್ರೆಸ್‌ನ ಪ್ರವೀಣ್ ಸಿಂಗ್ 1,778 ಮತಗಳಿಂದ ಮುನ್ನಡೆ

ಮುನ್ನಡೆ-ಹಿನ್ನಡೆ ವಿವರ

ಬಿಹಾರದ ಎಲ್ಲ 243 ಕ್ಷೇತ್ರಗಳ ಮುನ್ನಡೆ-ಹಿನ್ನಡೆ ವಿವರ ಪ್ರಕಟ. ಎನ್‌ಡಿಎ ಮತ್ತು ಮಹಾಘಟಬಂಧನ್ ಮೈತ್ರಿಕೂಟ ಜಿದ್ದಾಜಿದ್ದಿ ಪೈಪೋಟಿ.

ಎನ್‌ಡಿಎ ಮುನ್ನಡೆ ಸುಧಾರಣೆ: ಜಿದ್ದಾಜಿದ್ದಿ ಪೈಪೋಟಿ

ಮುಂಜಾನೆ ಮತ ಎಣಿಕೆ ಆರಂಭವಾದ ಕ್ಷಣದಿಂದ ಸ್ಪಷ್ಟ ಮುನ್ನಡೆ ಸಾಧಿಸಿದ್ದ ಮಹಾಘಟಬಂಧನ ಮೈತ್ರಿಕೂಟವನ್ನು ಎನ್‌ಡಿಎ ಯಶಸ್ವಿಯಾಗಿ ಬೆನ್ನಟ್ಟಿದೆ.

ಬೆಳಿಗ್ಗೆ 10.15ರ ಅವಧಿಯಲ್ಲಿ ಮಹಾಘಟಬಂಧನದ 115 ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದ, ಬಿಜೆಪಿಯ 110 ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದರು. ಎಲ್‌ಜೆಪಿಯ 9, ಇತರರು 9 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಇದೇ ಪರಿಸ್ಥಿತಿ ಮುಂದುವರಿದರೆ ಯಾವುದೇ ಒಂದು ಮೈತ್ರಿಕೂಟಕ್ಕೆ ನಿಚ್ಚಳ ಬಹುಮತ ಕಷ್ಟವಾಗಬಹುದು ಎನ್ನಲಾಗುತ್ತಿದೆ.

ಎಲ್ಲಿ ಯಾವ ಪಕ್ಷದ ಮುನ್ನಡೆ?

ಏಕೆ ಹೀಗಾಯ್ತು? ಜೆಡಿಯು ಹಿನ್ನಡೆ, ಬಿಜೆಪಿ ಮುನ್ನಡೆ

ಮುಖ್ಯಮಂತ್ರಿ ನಿತೀಶ್‌ ಕುಮಾರ್ ನೇತೃತ್ವದ ಆಡಳಿತಾರೂಢ ಜೆಡಿಯುಗಿಂತಲೂ ಬಿಜೆಪಿ ಹೆಚ್ಚಿನ ಸಂಖ್ಯೆಯ ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದೆ. ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡೇ ಚುನಾವಣಾ ಕಣಕ್ಕೆ ಇಳಿದಿದ್ದರೂ ಜೆಡಿಯು-ಬಿಜೆಪಿ ನಾಯಕರ ಮುನಿಸು ಹಲವು ಬಾರಿ ಹೊರಗೆ ಬಂದಿತ್ತು.

ಇದೀಗ ಫಲಿತಾಂಶದ ಆರಂಭದ ವಿವರಗಳನ್ನು ಗಮನಿಸಿದರೆ ಬಿಜೆಪಿಗಿಂತಲೂ ಜೆಡಿಯು ಸಾಧನೆ ಕಳಪೆಯಾಗಿರುವಂತೆ ಕಾಣಿಸುತ್ತಿದೆ. 

10 ಗಂಟೆ ಅವಧಿಯಲ್ಲಿ ಬಿಜೆಪಿ 60 ಕ್ಷೇತ್ರಗಳಲ್ಲಿ ಮತ್ತು ಜೆಡಿಯು 43 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು.

ಕಣದಲ್ಲಿದ್ದಾರೆ 3,700 ಅಭ್ಯರ್ಥಿಗಳು

ಬಿಹಾರ ಒಟ್ಟು 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಿತು. ಬಹುಮತ ಸಾಧಿಸಲು 122 ಶಾಸಕ ಬಲ ಬೇಕು. ಈ ಬಾರಿಯ ಚುನಾವಣೆಯಲ್ಲಿ ಒಟ್ಟು 3,700 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಜೆಡಿಯುಗಿಂತ ಬಿಜೆಪಿಗೆ ಹೆಚ್ಚು ಮುನ್ನಡೆ

ಜೆಡಿಯುಗಿಂತ ಬಿಜೆಪಿಗೆ ಹೆಚ್ಚು ಮುನ್ನಡೆ

ಉದ್ಯೋಗ ಭರವಸೆ VS ಆಡಳಿತ ವಿರೋಧಿ ಅಲೆ?

ಮತ ಎಣಿಕೆಯ ಆರಂಭದಲ್ಲಿ ಕಂಡುಬರುತ್ತಿರುವ ಮುನ್ನಡೆ ಮುಂದುವರಿದರೆ ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟವು ನಿಚ್ಚಳ ಬಹುಮತದೊಂದಿಗೆ ಅಧಿಕಾರ ಹಿಡಿಯುವುದು ಖಚಿತ ಎನಿಸುತ್ತಿದೆ. 

ಲಾಕ್‌ಡೌನ್ ಘೋಷಣೆಯಾದ ಸಂದರ್ಭ ವಲಸೆ ಕಾರ್ಮಿಕರ ಕಷ್ಟಕ್ಕೆ ನಿತೀಶ್ ನೇತೃತ್ವದ ಎನ್‌ಡಿಎ ಸರ್ಕಾರ ಸಮರ್ಪಕವಾಗಿ ಸ್ಪಂದಿಸಲಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದರ ಜೊತೆಗೆ ಬಿಹಾರದಲ್ಲಿ ಆಡಳಿತ ವಿರೋಧಿ ಅಲೆಯೂ ಇತ್ತು ಎಂಬ ಮಾತುಗಳಿದ್ದವು.

ಚುನಾವಣೆಯಲ್ಲಿ ಸ್ಥಳೀಯ ವಿಷಯವನ್ನು ಪ್ರಸ್ತಾಪಿಸಿದ್ದ ಆರ್‌ಜೆಡಿಯ ತೇಜಸ್ವಿ ಯಾದವ್‌ 10 ಲಕ್ಷ ಉದ್ಯೋಗದ ಭರವಸೆ ನೀಡಿ ಯುವಜನರನ್ನು ಆಕರ್ಷಿಸಿದ್ದರು. ಈ ಅಂಶಗಳು ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಮತ ಎಣಿಕೆ ಚುರುಕು: 116 ಕ್ಷೇತ್ರಗಳಲ್ಲಿ ಮಹಾಘಟಬಂಧನ ಮುನ್ನಡೆ

ಸೂರ್ಯ ಮೇಲೇರುತ್ತಿದ್ದಂತೆ ಬಿಹಾರ ಫಲಿತಾಂಶದ ಲೆಕ್ಕಾಚಾರದ ಕಾವೂ ಏರುತ್ತಿದೆ. ಬೆಳಿಗ್ಗೆ 9.45ರ ಅವಧಿಯಲ್ಲಿ ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟ ಮಹಾಘಟಬಂಧನದ ಅಭ್ಯರ್ಥಿಗಳು 116 ಕ್ಷೇತ್ರಗಳಲ್ಲಿ ಮತ್ತು ಜೆಡಿಯು-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳು 111 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರು.

ಆರ್‌ಜೆಡಿ ಬೆಂಬಲಿಗರಲ್ಲಿ ಮುನ್ನಡೆಯ ಖುಷಿ

ತೇಜಸ್ವಿ ಯಾದವ್ ಅವರ ಪಟ್ನಾ ನಿವಾಸದ ಎದುರು ಸೇರಿರುವ ಬೆಂಬಲಿಗರು

ಬಿಹಾರ: 63 ಕ್ಷೇತ್ರಗಳಲ್ಲಿ ಆರ್‌ಜೆಡಿ ಮುನ್ನಡೆ

ಮುನ್ನಡೆ ಸಾಧಿಸಿರುವ  ಪಕ್ಷಗಳು  ಮತ್ತು  ಸೀಟುಗಳ ಸಂಖ್ಯೆ 

ಬಿಜೆಪಿ -5
 ಜೆಡಿಯು- 2
ಆರ್‌ಜೆಡಿ- 1
ಕಾಂಗ್ರೆಸ್ - 1 
ವಿಕಾಶೀಲ್ ಇನ್ಸಾನ್  ಪಾರ್ಟಿ - 1
ಬಿಎಸ್‌ಪಿ - 1

ಹಾಜೀಪುರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಅವಧೇಶ್ ಸಿಂಗ್ ಮುನ್ನಡೆ

ಬೆನಿಪುರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಿಥಿಲೇಶ್ ಕುಮಾರ್ ಚೌಧರಿ ಮುನ್ನಡೆ

ಬಿಜೆಪಿ: 50
ಆರ್‌ಜೆಡಿ: 61
ಜೆಡಿಯು: 24
ಎಲ್‌ಜೆಪಿ: 5
ಇತರ- 45

ದರಬಂಗಾದಲ್ಲಿ ಬಿಜೆಪಿ ಅಭ್ಯರ್ಥಿ ಸಂಜಯ್ ಸರೋಗಿ ಮುನ್ನಡೆ

84 ಕ್ಷೇತ್ರಗಳಲ್ಲಿ ಮಹಾಘಟಬಂಧನ್ ಮುನ್ನಡೆ

ಬಿಜೆಪಿ: 40
ಆರ್‌ಜೆಡಿ: 53
ಜೆಡಿಯು: 17
ಕಾಂಗ್ರೆಸ್: 19
ಸಿಪಿಎಂ (ಎಂಎಲ್): 7
ಎಲ್‌ಜೆಪಿ: 5

ಎನ್‌ಡಿಎ: 61
ಎಂಜಿಬಿ: 84

ಮಾಧೇಪುರದಲ್ಲಿ ಆರ್‌ಜೆಡಿಗೆ ಹಿನ್ನಡೆ

ಆರ್‌ಜೆಡಿಯ ಪ್ರಮುಖ ನಾಯಕ ಪಪ್ಪು ಯಾದವ್ ಮಾಧೇಪುರ ಕ್ಷೇತ್ರದಲ್ಲಿ ಹಿನ್ನಡೆ. 2010-2015ರಲ್ಲಿ ಆರ್‌ಜೆಡಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು.

44 ಕ್ಷೇತ್ರಗಳಲ್ಲಿ ಆರ್‌ಜೆಡಿ ಮುನ್ನಡೆ

ಅಂಚೆ ಮತ ಎಣಿಕೆಯಲ್ಲಿ ಆರ್‌ಜೆಡಿ ಸ್ಪಷ್ಟ ಮುನ್ನಡೆ ದಾಖಲಿಸಿದೆ. ಬಿಜೆಪಿ 35, ಆರ್‌ಜೆಡಿ 44, ಜೆಡಿಯು 18, ಕಾಂಗ್ರೆಸ್ 18, ಸಿಪಿಐ (ಎಂಎಲ್) 7, ಎಲ್‌ಜೆಪಿ 2, ಇತರರು 4 ಕ್ಷೇತ್ರಗಳಲ್ಲಿ ಮುನ್ನಡೆ
 

ಮಹಾಘಟಬಂಧನ್ ಮುನ್ನಡೆ

ಮಹಾಘಟಬಂಧನ್-68, ಎನ್‌ಡಿಎ-52, ಎಲ್‌ಜೆಪಿ 1, ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ

ಮತ ಎಣಿಕೆ

ಬಿಹಾರದ ಅನುಗ್ರಹ ನಾರಾಯಣ್ ಕಾಲೇಜಿನಲ್ಲಿ ಮತ ಎಣಿಕೆ

ಅಂಚೆ ಮತ ಎಣಿಕೆ: ಸಮಬಲದ ಪೈಪೋಟಿ

ಎನ್‌ಡಿಎ 37 ಮತ್ತು ಎಂಜಿಬಿ 38 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

ಆರಂಭದಿಂದಲೇ ಮಹಾಘಟಬಂಧನ್ ಮುನ್ನಡೆ

ಬಿಹಾರ ಚುನಾವಣೆ ಅಂಚೆ ಮತ ಎಣಿಕೆಯು ಕ್ಷಣಕ್ಷಣಕ್ಕೂ ಚುರುಕಿನ ತಿರುವು ಪಡೆದುಕೊಳ್ಳುತ್ತಿದೆ.

ಜೆಡಿಯು ನಿರಾಸ ಪ್ರದರ್ಶನ ನೀಡುತ್ತಿದ್ದರೆ, ಆರ್‌ಜಿಡಿ ಮತ್ತು ಬಿಜೆಪಿ ನಡುವೆ ಮುನ್ನಡೆಯ ಹೊಯ್ದಾಟ ಕಾಣಿಸಿಕೊಳ್ಳುತ್ತಿದೆ.

ಮುಂಜಾನೆ 8.27ರ ಅವಧಿಯಲ್ಲಿ ಬಿಜೆಪಿ 22, ಆರ್‌ಜಿಡಿ 21, ಜೆಡಿಯುವ 6, ಕಾಂಗ್ರೆಸ್ 7, ಸಿಪಿಐ (ಎಂಎಲ್) 2 ಕ್ಷೇತ್ರಗಳಲ್ಲಿ ಮುನ್ನಡೆ ತೋರಿಸಿವೆ.

ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು 28ರಲ್ಲಿ, ಮಹಾಘಟಬಂಧನ್ ಅಭ್ಯರ್ಥಿಗಳು 32 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ತೇಜಸ್ವಿ ಸೋದರನಿಗೆ ಗೆಲುವಿನ ವಿಶ್ವಾಸ

ತೇಜಸ್ವಿ ಸೋದರನಿಗೆ ಗೆಲುವಿನ ವಿಶ್ವಾಸ

ಅಂಚೆ ಮತ ಎಣಿಕೆ ಆರಂಭ

ಎನ್‌ಡಿಎ 23, ಎಂಜಿಬಿ 21 ಕ್ಷೇತ್ರಗಳಲ್ಲಿ ಮುನ್ನಡೆ

ಅಂಚೆ ಮತ ಎಣಿಕೆ: ಬಿಜೆಪಿ 14 ಕ್ಷೇತ್ರಗಳಲ್ಲಿ ಮುನ್ನಡೆ

ಮಹಾಘಟಬಂಧನ್ 20, ಎನ್‌ಡಿಎ 21 ಕ್ಷೇತ್ರಗಳಲ್ಲಿ ಮುನ್ನಡೆ

ಬಿಜೆಪಿ 14, ಆರ್‌ಜೆಡಿ 13, ಜೆಡಿಯು 3, ಕಾಂಗ್ರೆಸ್‌ 1, ಸಿಪಿಐ (ಎಂಎಲ್) 1 ಕ್ಷೇತ್ರದಲ್ಲಿ ಮುನ್ನಡೆ.

ಅಂಚೆ ಮತ ಎಣಿಕೆ: ಬಿಜೆಪಿ 8 ಕ್ಷೇತ್ರಗಳಲ್ಲಿ ಮುನ್ನಡೆ

ಅಂಚೆ ಮತ ಎಣಿಕೆಯಲ್ಲಿ ಬಿಜೆಪಿ 8, ಆರ್‌ಜೆಡಿ 6, ಜೆಡಿಯು 2, ಕಾಂಗ್ರೆಸ್ 1, ಸಿಪಿಐ (ಎಂಎಲ್) 1 ಕ್ಷೇತ್ರದಲ್ಲಿ ಮುನ್ನಡೆ

'ತೇಜಸ್ವಿ ಭವ ಬಿಹಾರ'

'ತೇಜಸ್ವಿ ಭವ ಬಿಹಾರ' ಎಂದು ಟ್ವೀಟ್ ಮಾಡಿ ಸೋದರಿನಿಗೆ ಶುಭ ಕೋರಿದ ತೇಜ್ ಪ್ರತಾಪ್ ಯಾದವ್.

ಅಂಚೆ ಮತ ಎಣಿಕೆ ಆರಂಭ

ಬಿಜೆಪಿ 2, ಆರ್‌ಜೆಡಿ 3, ಜೆಡಿಯು 1 ಕ್ಷೇತ್ರದಲ್ಲಿ ಮುನ್ನಡೆ

ಅಂಚೆ ಮತ ಎಣಿಕೆ ಆರಂಭ

ಎನ್‌ಡಿಎ 3, ಮಹಾಘಟಬಂಧನ್ 3 ಕ್ಷೇತ್ರಗಳಲ್ಲಿ ಮುನ್ನಡೆ

ಬಿಹಾರದ ಗದ್ದುಗೆ ಯಾರಿಗೆ?

ನಿಜವಾಗುತ್ತಾ ಮತದಾನೋತ್ತರ ಸಮೀಕ್ಷೆ?

1157 ಅಭ್ಯರ್ಥಿಗೆ ಅಪರಾಧ ಹಿನ್ನೆಲೆ

ಪಟ್ನಾದ ಮತ ಎಣಿಕೆ ಕೇಂದ್ರ

8 ಗಂಟೆಗೆ ಮತ ಎಣಿಕೆ ಆರಂಭ

ಬಿಹಾರ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.