ADVERTISEMENT

ಕೋವಿಡ್‌: ಬಿಹಾರದಲ್ಲಿ ರಾತ್ರಿ ಕರ್ಫ್ಯೂ ಜಾರಿ

ಪಿಟಿಐ
Published 18 ಏಪ್ರಿಲ್ 2021, 14:38 IST
Last Updated 18 ಏಪ್ರಿಲ್ 2021, 14:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಾಟ್ನಾ: ಕೋವಿಡ್‌ ಹಿನ್ನೆಲೆಯಲ್ಲಿ ಬಿಹಾರ ಸರ್ಕಾರ ರಾಜ್ಯದಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿಗೊಳಿಸಲು ನಿರ್ಧರಿಸಿದೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್ ಈ ವಿಷಯ ಪ್ರಕಟಿಸಿದರು.

ರಾಜ್ಯದಾದ್ಯಂತ ಶಾಲೆ, ಕಾಲೇಜು, ಕೋಚಿಂಗ್‌ ಕೇಂದ್ರಗಳು ಹಾಗೂ ಧಾರ್ಮಿಕ, ಪೂಜಾ ಸ್ಥಳಗಳನ್ನು ಮೇ 15ರವರೆಗೆ ಮುಚ್ಚಲು ಆದೇಶಿಸಿದೆ. ಸರ್ಕಾರಿ ಕಚೇರಿಗಳು ಮೂರನೇ ಒಂದರಷ್ಟು ಸಿಬ್ಬಂದಿ ಸಾಮರ್ಥದಲ್ಲಿ ಸಂಜೆ 5ರವರೆಗೆ ಕಾರ್ಯನಿರ್ವಹಿಸಲಿವೆ. ಶಾಪ್‌ಗಳು, ಮಂಡಿ, ವಾಣಿಜ್ಯ ಚಟುವಟಿಕೆಗಳು ಸಂಜೆ 6ಕ್ಕೆ ಮುಚ್ಚಲಿವೆ.

ಮದುವೆ ಕಾರ್ಯಕ್ರಮಗಳಿಗೆ ಹಾಜರಿ ಮಿತಿಯನ್ನು 100 ಜನರಿಗೆ, ಅಂತ್ಯಕ್ರಿಯೆಗಳಿಗೆ ಹಾಜರಿ ಮಿತಿಯನ್ನು 25 ಜನರಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಸರ್ವಪಕ್ಷಗಳ ಮುಖಂಡರ ಸಭೆಯ ನಂತರ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.