ADVERTISEMENT

ಬಿಹಾರ ಚುನಾವಣೆ: ತಡರಾತ್ರಿವರೆಗೂ ಮತ ಎಣಿಕೆ ಸಾಧ್ಯತೆ

ಮುಖ್ಯ ಚುನಾವಣಾ ಆಯುಕ್ತರ ಸ್ಪಷ್ಟನೆ

ಪಿಟಿಐ
Published 10 ನವೆಂಬರ್ 2020, 9:47 IST
Last Updated 10 ನವೆಂಬರ್ 2020, 9:47 IST
ಪಟ್ಣಾದ ಪ್ರಮುಖ ಸ್ಥಳವೊಂದರಲ್ಲಿ ಮಂಗಳವಾರ  ಬೃಹತ್ ಪರದೆಯ ಮೇಲೆ ಪ್ರಕಟವಾಗುತ್ತಿರುವ ಚುನಾವಣೆಯ ಮತ ಎಣಿಕೆಯ ಮಾಹಿತಿಯನ್ನು ವೀಕ್ಷಿಸುತ್ತಿರುವ ಸಾರ್ವಜನಿಕರು.
ಪಟ್ಣಾದ ಪ್ರಮುಖ ಸ್ಥಳವೊಂದರಲ್ಲಿ ಮಂಗಳವಾರ  ಬೃಹತ್ ಪರದೆಯ ಮೇಲೆ ಪ್ರಕಟವಾಗುತ್ತಿರುವ ಚುನಾವಣೆಯ ಮತ ಎಣಿಕೆಯ ಮಾಹಿತಿಯನ್ನು ವೀಕ್ಷಿಸುತ್ತಿರುವ ಸಾರ್ವಜನಿಕರು.   

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಶೇ 63ರಷ್ಟು ಎಲೆಕ್ಟ್ರಾನಿಕ್ ಮತ ಯಂತ್ರಗಳ ಸಂಖ್ಯೆ ಏರಿಕೆಯಾದ ಕಾರಣ, ಇಂದು (ಮಂಗಳವಾರ) ತಡರಾತ್ರಿಯವರೆಗೂ ಮತ ಎಣಿಕೆ ಕಾರ್ಯ ಮುಂದುವರಿಯಲಿದೆ ಎಂದು ಚುನಾವಣಾ ಆಯುಕ್ತರು ಹೇಳಿದ್ದಾರೆ.

ಬಿಹಾರ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೂರು ಹಂತಗಳಲ್ಲಿ ಚಲಾವಣೆಯಾಗಿರುವ 4.16 ಕೋಟಿಯಷ್ಟು ಮತಗಳಲ್ಲಿ ಮಧ್ಯಾಹ್ನ 1.30ರವರೆಗೆ 1 ಕೋಟಿಯಷ್ಟು ಮತಗಳನ್ನು ಎಣಿಸಲಾಗಿದೆ‘ ಎಂದು ಹೇಳಿದರು. ಇಲ್ಲಿಯವರೆಗೆ ಮತ ಎಣಿಕೆ ಸುಗಮವಾಗಿ ಸಾಗಿದೆ ಎಂದು ಅಧಿಕಾರಿ ಹೇಳಿದರು.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕೇಂದ್ರದ ಮಾರ್ಗಸೂಚಿಗಳನ್ನು ಅನುಸರಿಸುವುದಕ್ಕಾಗಿ ಮತದಾನ ಕೇಂದ್ರಗಳ ಸಂಖ್ಯೆಯನ್ನು 65 ಸಾವಿರದಿಂದ 1.06 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಹೀಗಾಗಿ ಎಲೆಕ್ಟ್ರಾನಿಕ್ ಮತ ಯಂತ್ರಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.