ಸಾಂದರ್ಭಿಕ ಚಿತ್ರ
ಗೆಟ್ಟಿ ಚಿತ್ರ
ಭುವನೇಶ್ವರ: ಒಡಿಶಾದಲ್ಲಿ ಈಚೆಗಷ್ಟೇ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಬಿಜು ಪಟ್ನಾಯಕ್ ಕ್ರೀಡಾ ಪ್ರಶಸ್ತಿಯ ಹೆಸರನ್ನು ‘ಒಡಿಶಾ ರಾಜ್ಯ ಕ್ರೀಡಾ ಸಮ್ಮಾನ್’ ಎಂದು ಬದಲಾಯಿಸಿದೆ.
ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಯು ಇದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಪ್ರಶಸ್ತಿಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಎಂಟು ವಿಭಾಗದಲ್ಲಿ ವಾರ್ಷಿಕ ಪ್ರಶಸ್ತಿಗಳನ್ನು ನೀಡಲಾಗುವುದು. ನಗದು ಬಹುಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದೆ.
ಜೀವಮಾನ ಸಾಧನೆ ಪ್ರಶಸ್ತಿಗೆ ₹3 ಲಕ್ಷ ನಗದು, ಅತ್ಯುತ್ತಮ ಸಾಧನೆ ತೋರಿದವರಿಗೆ ₹2 ಲಕ್ಷ ಹಾಗೂ ಶ್ರೇಷ್ಠ ತರಬೇತುದಾರರು ಹಾಗೂ ಇತರ ವಿಭಾಗದ ಪ್ರಶಸ್ತಿಗಳ ಮೊತ್ತ ತಲಾ ₹1 ಲಕ್ಷ.
ಈ ಹಿಂದಿನ ಬಿಜೆಡಿ ಆಡಳಿತ ಜಾರಿಗೊಳಿಸಿದ್ದ ಜನಪ್ರಿಯ ಯೋಜನೆಗಳ ಹೆಸರನ್ನು ಬದಲಾಯಿಸಲು ಹಾಲಿ ಬಿಜೆಪಿ ನೇತೃತ್ವದ ಸರ್ಕಾರ ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.