ADVERTISEMENT

ದ್ವಿಪಕ್ಷೀಯ ಸಂಬಂಧ: ರಾಷ್ಟ್ರಪತಿ–ಯುಎಇ ರಾಯಭಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 14:13 IST
Last Updated 28 ನವೆಂಬರ್ 2022, 14:13 IST
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಯುಎಇ ರಾಯಭಾರಿ ಡಾ.ಅಬ್ದುಲ್‌ ನಾಸರ್‌ ಅಲ್ಶಾಲಿ ಸ್ಮರಣಿಕೆ ನೀಡಿದರು 
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಯುಎಇ ರಾಯಭಾರಿ ಡಾ.ಅಬ್ದುಲ್‌ ನಾಸರ್‌ ಅಲ್ಶಾಲಿ ಸ್ಮರಣಿಕೆ ನೀಡಿದರು    

ನವದೆಹಲಿ: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಭವನದಲ್ಲಿ ಸೋಮವಾರ ಭೇಟಿಯಾದ ಭಾರತದಲ್ಲಿರುವ ಯುಎಇ ರಾಯಭಾರಿ ಡಾ.ಅಬ್ದುಲ್‌ ನಾಸರ್‌ ಅಲ್ಶಾಲಿ ಸಮಾಲೋಚನೆ ನಡೆಸಿದರು.

ಯುಎಇ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಜಾಯೆದ್‌ ಅಲ್ ನಹ್ಯಾನ್‌ ಅವರ ಶುಭಾಶಯಗಳನ್ನು ರಾಷ್ಟ್ರಪತಿ ಅವರಿಗೆ ಹೇಳಿದರು. ‘ಯುಎಇ ದೇಶ ಇನ್ನಷ್ಟು ಪ್ರಗತಿ ಸಾಧಿಸಲಿ. ದ್ವಿಪಕ್ಷೀಯ ಸಂಬಂಧ ಸದಾ ಹೀಗೆಯೇ ಇರಲಿ. ಉಭಯ ರಾಷ್ಟ್ರಗಳು ಪರಸ್ಪರ ಸಹಕಾರದಿಂದ ಮುಂದುವರಿಯಬೇಕು’ ಎಂದು ರಾಷ್ಟ್ರಪತಿ ಅವರು ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT