ADVERTISEMENT

ಲೋಕಸಭೆ: ವ್ಯಕ್ತಿಯ ಗುರುತು ಪತ್ತೆಗೆ ’ಡಿಎನ್‌ಎ ತಂತ್ರಜ್ಞಾನ’ ಬಳಸಲು ಮಸೂದೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 13:33 IST
Last Updated 8 ಜನವರಿ 2019, 13:33 IST
   

ನವದೆಹಲಿ: ಅಪರಾಧಿಗಳು, ಕಾಣೆಯಾದವರ ಪತ್ತೆ ಹಚ್ಚಲು ಸಹಕಾರಿಯಾಗುವಡಿಎನ್‌ಎ ತಂತ್ರಜ್ಞಾನ ಮಸೂದೆಯನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು.

'ಡಿಎನ್ಎ ತಂತ್ರಜ್ಞಾನ (ಬಳಕೆ ಮತ್ತು ಉಪಯೋಗ) ನಿಯಮಾವಳಿ –2018’ ಮಸೂದೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಮಂಡಿಸಿದರು.ಖಾಸಗಿತನದ ಕಾಳಜಿ ಬಗ್ಗೆ ಪ್ರಶ್ನೆ ಮಾಡಿದ್ದ ಕಾಂಗ್ರೆಸ್, ಮಸೂದೆಯನ್ನುಸ್ಥಾಯಿ ಸಮಿತಿಗೆ ವರ್ಗಾಯಿಸಲು ಒತ್ತಾಯಿಸಿತ್ತು.

ಡಿಎನ್ಎತಂತ್ರಜ್ಞಾನಾಧರಿತ ಚಟುವಟಿಕೆಗಳನ್ನು ಈ ಮೂಲಕ ನಿಯಂತ್ರಿಸುವುದು ಮತ್ತು ನಿರ್ದೇಶಿಸುವುದು ಈ ಮಸೂದೆಯ ಉದ್ದೇಶವಾಗಿದೆ. ಡಿಎನ್‌ಎ ವಿಶ್ಲೇಷಿಸುವ, ಸಂಗ್ರಹಿಸುವ ಪ್ರಯೋಗಾಲಯಗಳು ಮಾನ್ಯತೆ ಹೊಂದುವುದು ಹಾಗೂ ನಿರ್ವಹಣೆಯನ್ನು ಖಚಿತಪಡಿಸಲಿದೆ. ಡಿಎನ್‌ಎ ದತ್ತಾಂಶನಿಧಿ ಸ್ಥಾಪನೆಯಾಗಲಿದೆ. ಖಾಸಗಿತನ, ದತ್ತಾಂಶ ಭದ್ರತೆ ಹಾಗೂ ಗೌಪ್ಯತೆ ರಕ್ಷಣೆ ವಿಚಾರಗಳಿಗೆಆದ್ಯತೆ ನೀಡಲಾಗುತ್ತದೆ ಎಂದು ವಿವರಿಸಿದರು.

ADVERTISEMENT

ಇದು ತಪ್ಪಿತಸ್ಥರ,ಕಾಣೆಯಾದವರ ಹುಡುಕಾಟ, ಅಪರಾಧಿಗಳು, ಅನುಮಾನಸ್ಪದ ವ್ಯಕ್ತಿಗಳು, ಅಪರಿಚಿತರು, ದುಷ್ಕರ್ಮಿಗಳ ಪತ್ತೆಗೆ ತಂತ್ರಜ್ಞಾನ ಅನುಕೂಲವಾಗಲಿದೆ. ಅಪರಾಧಿಗಳು ಹಾಗೂ ಕಾಣೆಯಾದ ವ್ಯಕ್ತಿಗಳ ಪ್ರಕರಣಗಳನ್ನು ಹೊರತು ಪಡಿಸಿ ಉಳಿದ ಸಂದರ್ಭಗಳಲ್ಲಿ ವ್ಯಕ್ತಿಯ ಗಮನಕ್ಕೆ ತಂದು ಡಿಎನ್‌ಎ ಸಂಗ್ರಹ ನಡೆಸಿ ವಿಶ್ಲೇಷಣೆ ಮಾಡಲಾಗುತ್ತದೆ.

ಪ್ರಯೋಗಾಲಯಗಳಿಗೆ ಮಾನ್ಯತೆ ನೀಡಲು ಹಾಗೂ ನಿಯಮಾವಳಿಗಳನ್ನು ರೂಪಿಸಲು ಡಿಎನ್ಎ ನಿಯಂತ್ರಣ ಮಂಡಳಿ ರೂಪಿಸುವುದುಮಸೂದೆಯಲ್ಲಿ ಒಳಗೊಂಡಿದೆ.ಅಲ್ಲದೇ 6 ಸಚಿವಾಲಯಗಳಾದ ಗೃಹ, ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಸಚಿವಾಲಯ,ತನಿಖಾ ಸಂಸ್ಥೆಗಳಾದ ಎನ್‌ಐಎ, ಸಿಬಿಐ ಇದರಿಂದ ಲಾಭ ಪಡೆಯಲಿವೆ.

ಈಗಾಗಲೇ ಈ ತಂತ್ರಜ್ಞಾನವು ಅಮೆರಿಕ, ಕೆನಡಾ, ನ್ಯೂಜಿಲೆಂಡ್, ಫಿನ್‌ಲ್ಯಾಂಡ್, ಬಾಂಗ್ಲಾದೇಶ ಸೇರಿ 60 ರಾಷ್ಟ್ರಗಳಲ್ಲಿಹಲವು ಪ್ರಕರಣಗಳ ಪತ್ತೆ ಹಚ್ಚಲು, ಕಾಣೆಯಾದ ವ್ಯಕ್ತಿಗಳನ್ನು ಹುಡುಕಾಟಕ್ಕೆ ಅನುಕೂಲವಾಗಿದೆ. ಇದೀಗ ದೇಶದಲ್ಲಿ ಬೆರಳಚ್ಚು ತಂತ್ರಜ್ಞಾನ ಬಳಕೆಯಲ್ಲಿದ್ದು, ಅವಶ್ಯವಿರುಷ್ಟುಪರಿಣಿತರು ಹಾಗೂ ಪ್ರಯೋಗಾಲಯಗಳ ಕೊರತೆಯಿದೆ.

ರಾಷ್ಟ್ರದಲ್ಲಿ3000 ಡಿಎನ್‌ಎ ಸಂಗ್ರಹ, ವಿಶ್ಲೇಷಣೆ ಸಾಧ್ಯವಾಗುತ್ತಿದೆ.ಇದು ಅವಶ್ಯಕತೆಗಿಂತ ಶೇ 2–3ರಷ್ಟು ಮಾತ್ರ. ಅಲ್ಲದೇ ಡಿಎನ್‌ಎ ದತ್ತಾಂಶ ಸಂಗ್ರಹ ಬ್ಯಾಂಕ್‌ಗಳು ಇಲ್ಲ ಹಾಗೂ ನಿರ್ದಿಷ್ಟ ಗುಣಮಟ್ಟದ ಪ್ರಯೋಗಾಲಯಗಳುಇಲ್ಲ ಎಂದು ಹರ್ಷವಧನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.