ADVERTISEMENT

ರಾಷ್ಟ್ರಪತಿ ಮುರ್ಮು ಆತ್ಮಚರಿತ್ರೆ ಈ ವರ್ಷ ಬಿಡುಗಡೆ

ಪಿಟಿಐ
Published 2 ಆಗಸ್ಟ್ 2022, 14:14 IST
Last Updated 2 ಆಗಸ್ಟ್ 2022, 14:14 IST
ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು   

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆತ್ಮಚರಿತ್ರೆಯು ಈ ವರ್ಷ ಬಿಡುಗಡೆಯಾಗಲಿದೆ ಎಂದು ಪೆಂಗ್ವಿನ್‌ ರ‍್ಯಾಂಡಮ್‌ ಹೌಸ್‌ ಇಂಡಿಯಾ (ಪಿಆರ್‌ಎಚ್‌ಐ) ಮಂಗಳವಾರ ಘೋಷಿಸಿದೆ.

‘ಮೇಡಂ ಪ್ರೆಸಿಡೆಂಟ್‌: ಎ ಬಯೊಗ್ರಫಿ ಆಫ್‌ ದ್ರೌಪದಿ ಮುರ್ಮು’ ಪುಸ್ತಕವು ದೇಶದ ಅತ್ಯುನ್ನತ ಹುದ್ದೆಗೇರಿದ ಮುರ್ಮು ಅವರ ಆರಂಭಿಕ ಜೀವನ, ಹೋರಾಟ, ನೋವನ್ನು ಒಳಗೊಂಡ ಜೀವನಗಾಥೆಯನ್ನು ಹೊಂದಿರಲಿದೆ.

ಪುಸ್ತಕವನ್ನು ಭುವನೇಶ್ವರ ಮೂಲದ ಹಿರಿಯ ಪತ್ರಕರ್ತ ಸಂದೀಪ್‌ ಸಾಹು ಅವರು ಬರೆದಿದ್ದಾರೆ’ ಎಂದು ಅದು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.