ADVERTISEMENT

ಬಿಜೆಪಿ ಕಾರ್ಯಕರ್ತರಿಂದ ಜೀವ ಬೆದರಿಕೆ: ಶಶಿ ತರೂರ್ ಆರೋಪ

​ಪ್ರಜಾವಾಣಿ ವಾರ್ತೆ
Published 16 ಜುಲೈ 2018, 14:23 IST
Last Updated 16 ಜುಲೈ 2018, 14:23 IST
ಶಶಿ ತರೂರ್
ಶಶಿ ತರೂರ್   

ನವದೆಹಲಿ: ತಿರುವನಂತಪುರಂನಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ತನಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಆರೋಪಿಸಿದ್ದಾರೆ.ತಮ್ಮ ಕಚೇರಿಯ ಬಾಗಿಲು, ಗೋಡೆ ಮತ್ತು ಫಲಕದ ಮೇಲೆ ಮಸಿ ಬಳಿದ ಬಿಜೆಪಿ ಯುವ ಘಟಕದ ಕಾರ್ಯಕರ್ತರು ಕಚೇರಿ ಮುಂದೆ ಹಿಂದೂ ಪಾಕಿಸ್ತಾನ್ ಎಂಬ ಬ್ಯಾನರ್ ಕಟ್ಟಿ ಹೋಗಿದ್ದಾರೆ ಎಂದು ತರೂರ್ ಹೇಳಿದ್ದಾರೆ.

2019ರಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಿದರೆ ಭಾರತ ಹಿಂದೂ ಪಾಕಿಸ್ತಾನ್ ಆಗುತ್ತದೆ ಎಂದು ಶಶಿ ತರೂರ್ ಹೇಳಿದ್ದನ್ನು ಪ್ರತಿಭಟಿಸಿ ಬಿಜೆಪಿ ಕಾರ್ಯಕರ್ತರು ಈ ಕೃತ್ಯವೆಸಗಿದ್ದಾರೆ.ಮನವಿ ಸಲ್ಲಿಸುವುದಕ್ಕಾಗಿ ತಮ್ಮ ಕಚೇರಿ ಮುಂದೆ ಕಾದು ನಿಂತಿದ್ದ ಸ್ಥಳೀಯರನ್ನು ಬಿಜೆಪಿ ಕಾರ್ಯಕರ್ತರು ಓಡಿಸಿದ್ದಾರೆ.ಇದು ಪ್ರಜಾಪ್ರಭುತ್ವ ವಿರೋಧಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಎಂದ ತರೂರ್, ಈ ಬಗ್ಗೆ ಕೇರಳ ಪೊಲೀಸರಿಗೆ ದೂರು ನೀಡಿದ್ದೇನೆ ಎಂದಿದ್ದಾರೆ.

ಕಚೇರಿ ಮೇಲೆ ದಾಳಿ ನಡೆದಾಗ ತರೂರ್ ಅಲ್ಲಿರಲಿಲ್ಲ. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನನ್ನ ಕಚೇರಿಯ ಗೋಡೆ, ಬಾಗಿಲು ಹಾಗೂ ಫಲಕಗಳಿಗೆ ಮಸಿ ಬಳಿದು ಮನವಿ ಸಲ್ಲಿಸಲು ಕಾದು ನಿಂತಿದ್ದ ಮುಗ್ದ ಜನರನ್ನು ಓಡಿಸಿದ್ದಾರೆ.ಕಚೇರಿ ಮುಂದೆ ಆಕ್ಷೇಪಾರ್ಹ ಬ್ಯಾನರ್ ಕಟ್ಟಿ, ಪಾಕಿಸ್ತಾನಕ್ಕೆ ಹೋಗಿ ಎಂದು ಘೋಷಣೆ ಕೂಗಿರುವುದಾಗಿತರೂರ್ ಟ್ವೀಟ್ ಮಾಡಿದ್ದಾರೆ.

ADVERTISEMENT

ಇನ್ನೊಂದು ಟ್ವೀಟ್‍ನಲ್ಲಿನಮಗೆಲ್ಲರಿಗೂ ಎಚ್ಚರಿಕೆ ನೀಡಲಾಗಿದೆ.ಹಿಂದೂ ರಾಷ್ಟ್ರದ ಕನಸನ್ನು ನೀವು ಕೈ ಬಿಟ್ಟಿದ್ದೀರಾ ಎಂಬ ಪ್ರಶ್ನೆಗೆ ಬಿಜೆಪಿಯ ಉತ್ತರ ಈ ರೀತಿಯ ದಾಂಧಲೆ ಮತ್ತು ಸಂಘರ್ಷಗಳು. ತಿರುವನಂತಪುರಂನಲ್ಲಿ ನೀವು ಇವತ್ತು ಮಾಡಿರುವ ಕೃತ್ಯ ನಿಮ್ಮ ನಿಜ ಬಣ್ಣವನ್ನು ತೋರಿಸಿದೆ.ಸಂಘಿ ಗೂಂಡಾಗಳು ನಮ್ಮನ್ನು ಪ್ರತಿನಿಧಿಕರಿಸು ವುದಿಲ್ಲ ಎಂದು ಹೆಚ್ಚಿನ ಹಿಂದೂಗಳು ಹೇಳುತ್ತಿದ್ದಾರೆ ಎಂದಿದ್ದಾರೆ ತರೂರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.