ADVERTISEMENT

ಔರಂಗಾಬಾದ್‌ಗೆ ಸಂಭಾಜಿನಗರ ಎಂದು ಮರುನಾಮಕರಣ ಮಾಡಲು ಬಿಜೆಪಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 5:06 IST
Last Updated 2 ಮಾರ್ಚ್ 2020, 5:06 IST
ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌
ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌   

ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್‌ ಅನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡಲು ಬಿಜೆಪಿ ಒತ್ತಾಯಿಸಿದೆ.

ಮಧ್ಯ ಮಹಾರಾಷ್ಟ್ರದ ಕೈಗಾರಿಕಾ ಕೇಂದ್ರವಾಗಿರುವ ಔರಂಗಾಬಾದ್‌ಗೆ 17ನೇ ಶತಮಾನದ ಮೊಘಲ್‌ ಚಕ್ರವರ್ತಿ ಔರಂಗಜೇಬ್‌ ಹೆಸರನ್ನು ನಾಮಕರಣ ಮಾಡಲಾಗಿದೆ.

ಔರಂಗಾಬಾದ್‌ಗೆ ಶಿವಾಜಿ ಮಹಾರಾಜರ ‍ಪುತ್ರ ಸಂಭಾಜಿ ಹೆಸರು ಇಡಲು ಶಿವಸೇನಾ ನೇತೃತ್ವದ ಸರ್ಕಾರಕ್ಕೆ ಬಿಜೆಪಿ ಒತ್ತಾಯಿಸಿದೆ.

ADVERTISEMENT

ಈ ಬಗ್ಗೆ ಮಾತನಾಡಿರುವ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌, ‘ನಾವು ಶಿವಾಜಿ ಮಹಾರಾಜ ಮತ್ತು ಅವರ ಮಗ ಸಂಭಾಜಿ ಮಹಾರಾಜರ ವಂಶಸ್ಥರೇ ಹೊರತು ಔರಂಗಜೇಬನ ವಂಶಸ್ಥರಲ್ಲ. ಆದ್ದರಿಂದ, ಔರಂಗಾಬಾದ್‌ ಅನ್ನು ಸಂಭಾಜಿನಗರವೆಂದು ಮರುನಾಮಕರಣ ಮಾಡಬೇಕು’ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್‌, ‘ಆರ್‌ಎಸ್‌ಎಸ್‌ ಪ್ರಮುಖ ಎಂ.ಎಸ್‌.ಗೋಳ್ವಾಲ್ಕರ್ ಅವರು ಛತ್ರಪತಿ ಸಂಭಾಜಿಯನ್ನು ಅವಮಾನಿಸಿದ್ದಾರೆ. ಮೊದಲು ಗೋಳ್ವಾಲ್ಕರ್‌ ಬರವಣಿಗೆಯನ್ನು ಬಿಜೆಪಿ ಖಂಡಿಸಲಿ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.