ADVERTISEMENT

ಬಿಜೆಪಿಯಿಂದ ರಾಮನಿಗೆ ಅವಮಾನ: ಅಖಿಲೇಶ್‌

ಪಿಟಿಐ
Published 10 ಫೆಬ್ರುವರಿ 2024, 15:50 IST
Last Updated 10 ಫೆಬ್ರುವರಿ 2024, 15:50 IST
<div class="paragraphs"><p>ಅಖಿಲೇಶ್‌ ಯಾದವ್‌</p></div>

ಅಖಿಲೇಶ್‌ ಯಾದವ್‌

   

ಲಖನೌ: ‘ಶ್ರೀರಾಮನನ್ನು ಅಯೋಧ್ಯೆಯಲ್ಲಿನ ಮಂದಿರಕ್ಕೆ ಮರಳಿ ಕರೆತರಲಾಗಿದೆ ಎಂದು ಹೇಳುವ ಮೂಲಕ ಬಿಜೆಪಿಯು, ಜನರ ಹೃದಯದಲ್ಲಿದ್ದ ಹಿಂದೂ ದೇವನನ್ನು ಅವಮಾನಿಸುತ್ತಿದೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಆಡಳಿತಾರೂಢ ಕಮಲ ಪಾಳೆಯದ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದರು.

‘ಭಗವಾನ್ ರಾಮನು ಜನರ ಹೃದಯದಲ್ಲಿ ನೆಲೆಸಿದ್ದಾನೆ. ಅವರ ಹೆಸರನ್ನು ಬಳಸಿಕೊಳ್ಳುವ ಅವಶ್ಯಕತೆ ಏನಿದೆ? ರಾಮ ಈ ಹಿಂದೆಯೂ ಇದ್ದರು’ ಎಂದು ಬಜೆಟ್‌ ಅಧಿವೇಶನದಲ್ಲಿ ಅಖಿಲೇಶ್‌ ಹೇಳಿದರು.

ADVERTISEMENT

‘ರಾಮ ಇಂದಿಗೂ ಇದ್ದಾನೆ. ಸದಾ ಕಾಲ ಇರುತ್ತಾನೆ. ನಾವು ಇಲ್ಲದಿದ್ದಾಗಲೂ ಇದ್ದ. ಮುಂದಿನ ದಿನಗಳಲ್ಲಿ ನಾವಿಲ್ಲದಿರುವಾಗಲೂ ರಾಮನಿರುತ್ತಾನೆ. ಆದರೆ ನೀವು, ರಾಮನನ್ನು ನಾವು ಕರೆ ತಂದಿದ್ದೇವೆ ಎಂದು ಹೇಳುವ ಮೂಲಕ ರಾಮನಿಗಷ್ಟೇ ಅಲ್ಲದೇ ಧರ್ಮವನ್ನೂ ಅವಮಾನಿಸುತ್ತಿದ್ದೀರಿ’ ಎಂದು ವಾಗ್ದಾಳಿ ನಡೆಸಿದ ಅವರು, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಕೈಬಿಡಿ ಎಂದು ಬಿಜೆಪಿ ಮುಖಂಡರಿಗೆ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.