ADVERTISEMENT

ಬಿಜೆಪಿ: ಸಂಸದೀಯ ಪಕ್ಷದ ಕಾರ್ಯಕಾರಿ ಸಮಿತಿ ರಚನೆ

ಲೋಕಸಭೆಯಲ್ಲಿ ಮೋದಿ, ರಾಜ್ಯಸಭೆಯಲ್ಲಿ ತಾವರ್‌ಚಂದ್‌ ಗೆಹ್ಲೋಟ್‌ ನಾಯಕರು

ಪಿಟಿಐ
Published 12 ಜೂನ್ 2019, 18:30 IST
Last Updated 12 ಜೂನ್ 2019, 18:30 IST
ತಾವರ್‌ಚಂದ್ ಗೆಹ್ಲೋಟ್‌
ತಾವರ್‌ಚಂದ್ ಗೆಹ್ಲೋಟ್‌   

ನವದೆಹಲಿ: ಬಿಜೆಪಿಯ ಸಂಸದೀಯ ಪಕ್ಷದ ಕಾರ್ಯಕಾರಿ ಸಮಿತಿಯನ್ನು ಬುಧವಾರ ರಚಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ನಾಯಕರಾಗಿದ್ದಾರೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಉಪನಾಯಕರಾಗಿದ್ದಾರೆ.

ರಾಜ್ಯಸಭೆಯಲ್ಲಿ ತಾವರ್‌ಚಂದ್‌ ಗೆಹ್ಲೋಟ್‌ ಅವರನ್ನು ನಾಯಕರನ್ನಾಗಿ ಹಾಗೂ ಪೀಯೂಷ್ ಗೋಯಲ್ ಅವರನ್ನು ಉಪ ನಾಯಕರನ್ನಾಗಿ ನೇಮಿಸಲಾಗಿದೆ.

ADVERTISEMENT

ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಅರುಣ್‌ ಜೇಟ್ಲಿ ಅವರು ನಿರ್ವಹಿಸಿದ್ದ ಈ ಹುದ್ದೆಯನ್ನು ಈಗ ಗೆಹ್ಲೋಟ್‌ ನಿಭಾಯಿಸಲಿದ್ದಾರೆ.

ಮೋದಿ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವರಾಗಿರುವ ಗೆಹ್ಲೋಟ್‌ ಅವರು ಅನುಭವಿ ಸಂಸದೀಯ ಪಟು ಹಾಗೂ ದಲಿತ ಮುಖಂಡರಾಗಿದ್ದಾರೆ.

ಸಚಿವೆ ಸ್ಮೃತಿ ಇರಾನಿ ಅವರನ್ನು ಕಾರ್ಯಕಾರಿ ಸಮಿತಿಗೆ ವಿಶೇಷ ಆಹ್ವಾನಿತರನ್ನಾಗಿ ನೇಮಿಸಲಾಗಿದೆ. ಈ ಮೂಲಕ ಇರಾನಿ ಅವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ.

ಲೋಕಸಭೆಯಿಂದ ನಿತಿನ್‌ ಗಡ್ಕರಿ, ರವಿ ಶಂಕರ್‌ ಪ್ರಸಾದ್‌, ಅರ್ಜುನ್‌ ಮುಂಡಾ, ನರೇಂದ್ರ ಸಿಂಗ್‌ ತೋಮರ್‌, ಜುವಲ್‌ ಒರಮ್‌ ಹಾಗೂ ರಾಜ್ಯಸಭೆಯಿಂದ ಜೆ.ಪಿ. ನಡ್ಡಾ, ಓಂ ಪ್ರಕಾಶ್‌ ಮಾಥೂರ್‌, ನಿರ್ಮಲಾ ಸೀತಾರಾಮನ್‌, ಧರ್ಮೇಂದ್ರ ಪ್ರಧಾನ್‌ ಮತ್ತು ಪ್ರಕಾಶ್‌ ಜಾವಡೇಕರ್‌ ಇತರ ವಿಶೇಷ ಆಹ್ವಾನಿತರಾಗಿದ್ದಾರೆ.

ಮುಖ್ಯ ಸಚೇತಕ: ಸಂಜಯ್‌ ಜೈಸ್ವಾಲ್ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ.

ಇದೇ ಪ್ರಥಮ ಬಾರಿ ಮಹಿಳಾ ಸಂಸದೆಯರಿಗಾಗಿಯೇ ಮೂವರು ಮಹಿಳಾ ಸಂಸದೆಯರನ್ನು ಸಚೇತರನ್ನಾಗಿ ನೇಮಿಸಲಾಗಿದೆ. ಇವರ ಜತೆಗೆ ಲೋಕಸಭೆಯಲ್ಲಿ ವಿವಿಧ ರಾಜ್ಯಗಳ ಇತರ 15 ಮಂದಿಯನ್ನು ಸಚೇತಕರನ್ನಾಗಿ ನೇಮಿಸಲಾಗಿದೆ.

ರಾಜ್ಯಸಭೆಯಲ್ಲಿ ಆರು ಮಂದಿಯನ್ನು ಸಚೇತಕರನ್ನಾಗಿ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.