
ಸಾವು (ಪ್ರಾತಿನಿಧಿಕ ಚಿತ್ರ)
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್ ಘೋಷ್ (Dilip Ghosh) ಮಲಮಗ ಪ್ರೀತಮ್ ಮಜುಂದಾರ್ ಶವವಾಗಿ ಪತ್ತೆಯಾಗಿದ್ದರೆ.
ಅವರಿಗೆ 26 ವರ್ಷ ವಯಸ್ಸಾಗಿತ್ತು. ಇಲ್ಲಿನ ನ್ಯೂ ಟೌನ್ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಪ್ರೀತಮ್ ಶವವಾಗಿ ಪತ್ತೆಯಾಗಿದ್ದಾರೆ.
ದಿಲೀಪ್ ಘೋಷ್ ಅವರ ಪತ್ನಿಯ ಮೊದಲ ಪತಿಯಿಂದ ಜನಿಸಿದ್ದ ಪ್ರೀತಮ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ತಕ್ಷಣಕ್ಕೆ ಆತ್ಮಹತ್ಯೆ ಅಥವಾ ಕೊಲೆ ಎಂಬುದು ತಿಳಿದುಬಂದಿಲ್ಲ, ತನಿಖೆಯ ನಂತರ ಗೊತ್ತಾಗಲಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಪ್ರೀತಮ್ ಮಜುಂದಾರ್ ಅವರ ತಾಯಿ ರಿಂಕು ಮಜುಂದಾರ್ ಬಿಜೆಪಿಯ ನಾಯಕಿಯಾಗಿದ್ದಾರೆ. ಈ ಹಿಂದೆ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿದ್ದರು. 60 ವರ್ಷದ ದಿಲೀಪ್ ಘೋಷ್, ಕಳೆದ ತಿಂಗಳು ರಿಂಕು ಮಜುಂದಾರ್ ಅವರನ್ನು ವಿವಾಹವಾಗಿದ್ದರು.
ರಿಂಕುಗೆ ಇದು ಎರಡನೆ ವಿವಾಹವಾದರೆ, ದಿಲೀಪ್ ಘೋಷ್‌ಗೆ ಮೊದಲ ವಿವಾಹವಾಗಿದೆ.
ಸುಮಾರು 50 ವರ್ಷಗಳಿಂದ ಆರ್‌ಎಸ್‌ಎಸ್‌ನಲ್ಲಿ ಸಕ್ರಿಯರಾಗಿರುವ ದಿಲೀಪ್ ಘೋಷ್ 2015 ರಿಂದ 2021ರವರೆಗೆ ಬಿಜೆಪಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಎಡಪಂಥೀಯ ಮತ್ತು ತೃಣಮೂಲ ಪಕ್ಷಗಳು ಪ್ರಾಬಲ್ಯ ಹೊಂದಿರುವ ಬಂಗಾಳದಲ್ಲಿ ಬಿಜೆಪಿಗೆ ಶಕ್ತಿ ತುಂಬುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.