ADVERTISEMENT

ರಾಜಸ್ಥಾನ: ಕಾಂಗ್ರೆಸ್‌ನಲ್ಲಿ ಬಿಎಸ್‌ಪಿ ವಿಲೀನ ರದ್ದು ಕೋರಿ ಕೋರ್ಟ್‌ಗೆ ಮೊರೆ

ಪಿಟಿಐ
Published 24 ಜುಲೈ 2020, 8:37 IST
Last Updated 24 ಜುಲೈ 2020, 8:37 IST
ಸೋನಿಯಾ ಗಾಂಧಿ ಮತ್ತು ಮಾಯಾವತಿ
ಸೋನಿಯಾ ಗಾಂಧಿ ಮತ್ತು ಮಾಯಾವತಿ   

ಜೈಪುರ: ‘ಬಿಎಸ್‌ಪಿಯ ಆರು ಮಂದಿ ಶಾಸಕರನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡಿರುವ ಪ್ರಕ್ರಿಯೆಯನ್ನು ರದ್ದುಪಡಿಸಬೇಕು’ ಎಂದು ಒತ್ತಾಯಿಸಿ ಬಿಜೆಪಿ ಶಾಸಕ ಮದನ್‌ ದಿಲಾವರ್‌ ಅವರು ರಾಜಸ್ಥಾನ ಹೈಕೋರ್ಟ್‌ಗೆ ಶುಕ್ರವಾರ ಆರ್ಜಿ ಸಲ್ಲಿಸಿದ್ದಾರೆ.

‘ಪಕ್ಷಾಂತರ ಮಾಡಿರುವ ಆರು ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿದ್ದರೂ ಅವರು ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ’ ಎಂದು ದಿಲಾವರ್‌ ದೂರಿದ್ದಾರೆ. ಅರ್ಜಿಯು ಸೋಮವಾರ ವಿಚಾರಣೆಗೆ ಬರಲಿದೆ.

2018ರಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ ಈ ಆರು ಶಾಸಕರು, ಪಕ್ಷಾಂತರ ನಿಷೇಧ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಗುಂಪಾಗಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಬಿಎಸ್‌ಪಿಯ ಈ ಶಾಸಕರ ನೆರವಿನಿಂದ ರಾಜಸ್ಥಾನದಲ್ಲಿ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗಿತ್ತು. ‘ಈ ಶಾಸಕರನ್ನು ಕಾಂಗ್ರೆಸ್‌ ಪಕ್ಷದ ಅವಿಭಾಜ್ಯ ಭಾಗ ಎಂದು ಪರಿಗಣಿಸಲಾಗುವುದು’ ಎಂದು ಆಗ ಸ್ಪೀಕರ್‌ ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.