ADVERTISEMENT

ಮಣಿಪುರ: ಸರ್ಕಾರ ಮರುಸ್ಥಾಪಿಸಲು ಬಿಜೆಪಿ ಶಾಸಕರ ಒಲವು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 15:31 IST
Last Updated 4 ಅಕ್ಟೋಬರ್ 2025, 15:31 IST
<div class="paragraphs"><p>ಬಿಜೆಪಿ</p></div>

ಬಿಜೆಪಿ

   

ಗುವಾಹಟಿ: ಮಣಿಪುರದಲ್ಲಿ ಇರುವ ರಾಷ್ಟ್ರಪತಿ ಆಳ್ವಿಕೆಯನ್ನು ಕೊನೆಗೊಳಿಸಿ, ಜನರಿಂದ ಚುನಾಯಿತವಾದ ಸರ್ಕಾರವನ್ನು ಮರುಸ್ಥಾಪಿಸುವಂತೆ ಪಕ್ಷದ ಕೇಂದ್ರ ನಾಯಕರಲ್ಲಿ ಮನವರಿಕೆ ಮಾಡಿಕೊಡಲು ಮಾಜಿ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಸೇರಿ ಮೂವರು ಶಾಸಕರು ಶನಿವಾರ ದೆಹಲಿಗೆ ತೆರಳಿದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಸ್ಥಿತಿಗತಿ ಸೇರಿದಂತೆ ಸಂಘರ್ಷದಿಂದ ನಿರಾಶ್ರಿತರಾದ ಜನರ ಬಗ್ಗೆ ಮತ್ತು ಹೆದ್ದಾರಿಗಳಲ್ಲಿ ಸಂಚಾರ ಆರಂಭಿಸುವ ಕುರಿತು ವಸ್ತುಸ್ಥಿತಿಯನ್ನು ನಮ್ಮ ನಾಯಕರಿಗೆ ತಿಳಿಸಲಿದ್ದೇವೆ’ ಎಂದು ಬಿರೇನ್‌ ಸಿಂಗ್‌ ಅವರು ಪತ್ರಕರ್ತರಿಗೆ ಮಾಹಿತಿ ನೀಡಿದರು.

ADVERTISEMENT

ವಿಧಾನಸಭೆ ಸ್ಪೀಕರ್‌ ಅವರ ನೇತೃತ್ವದಲ್ಲಿಯೂ ಕೆಲವು ಬಿಜೆಪಿ ಶಾಸಕರು ದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಶಾಸಕರು ಮೊದಲಿಗೆ ಮಣಿಪುರ ಉಸ್ತುವಾರಿ ಸಂಬಿತ್‌ ಪಾತ್ರ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ, ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಬಹುದು ಎನ್ನಲಾಗುತ್ತಿದೆ.

ಮಣಿಪುರದಲ್ಲಿ ಫೆಬ್ರುವರಿಯಿಂದ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ‘ಕೆಲವು ತಿಂಗಳಿನಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದೆ. ಆದ್ದರಿಂದ, ಚುನಾಯಿತ ಸರ್ಕಾರವನ್ನು ಮರುಸ್ಥಾಪಿಸಬಹುದು’ ಎನ್ನುವುದು ಕೆಲವು ಬಿಜೆಪಿ ನಾಯಕರ ಅಭಿಪ್ರಾಯ. ‘ಬಹುಶಃ ರಾಜ್ಯದಲ್ಲಿ ಉಂಟಾಗಿರುವ ಸಂಘರ್ಷಕ್ಕೆ ಪರಿಹಾರ ಸಿಗುವವರೆಗೂ ರಾಷ್ಟ್ರಪತಿ ಆಳ್ವಿಕೆಯನ್ನು ತೆಗೆಯುವುದಿಲ್ಲ’ ಎನ್ನುವುದು ಇನ್ನೂ ಕೆಲವು ನಾಯಕರ ಅಭಿಮತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.