ADVERTISEMENT

ವಾದ್ರಾಗೆ ಐಟಿ ನೋಟಿಸ್‌: ರಾಹುಲ್‌ ಕೆಣಕಿದ ಬಿಜೆಪಿ

ಪಿಟಿಐ
Published 27 ಜೂನ್ 2018, 20:18 IST
Last Updated 27 ಜೂನ್ 2018, 20:18 IST

ನವದೆಹಲಿ: ರಾಬರ್ಟ್‌ ವಾದ್ರಾಗೆ ಆದಾಯ ತೆರಿಗೆ(ಐಟಿ) ಇಲಾಖೆ ನೋಟಿಸ್‌ ಜಾರಿ ಮಾಡಿರುವ ಕುರಿತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಕೆಣಕಿರುವ ಬಿಜೆ‍ಪಿ, ಈ ಕುರಿತು ಅವರು ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದೆ.

‘ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿರುವುದಕ್ಕೆ ದೇಶದಿಂದ ಪಲಾಯನ ಮಾಡಿರುವ ಉದ್ಯಮಿ ವಿಜಯ್‌ ಮಲ್ಯ ಮತ್ತು ರಾಬರ್ಟ್‌ ವಾದ್ರಾ ಅವರೇ ಸಾಕ್ಷಿ’ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಹೇಳಿದ್ದಾರೆ.

ಈಗ ಇಬ್ಬರೂ ಕಾನೂನಿನ ಬಿಸಿ ಅನುಭವಿಸುತ್ತಿದ್ದಾರೆ ಮತ್ತು ಅಭದ್ರರಾಗಿದ್ದಾರೆ ಎಂದಿದ್ದಾರೆ.

ADVERTISEMENT

2010–11ರ ಬಾಕಿಯಿರುವ ತೆರಿಗೆ ಹಣ ₹25 ಕೋಟಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯು ರಾಬರ್ಟ್‌ ವಾದ್ರಾ ಮತ್ತು ಅವರ ಸ್ಕೈಲೈಟ್‌ ಹಾಸ್ಪಿಟಾಲಿಟಿ ಕಂಪನಿಗೆ ನೋಟಿಸ್‌ ಜಾರಿ ಮಾಡಿದೆ.

ತಿರುಗೇಟು: ವಾದ್ರಾ ಮೇಲೆ ಬಿಜೆಪಿ ಆರೋಪಕ್ಕೆ ಪ್ರತಿಯಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ತಿರುಗಿಬಿದ್ದಿದೆ. ಶಾ ಅವರ ಮಗ ಜೈ ಶಾ ಅವರ ವ್ಯವಹಾರ ಏಕಾಏಕಿ ಹೆಚ್ಚಳವಾಗಿದ್ದು ಹೇಗೆ ಎಂದು ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.