ADVERTISEMENT

Delhi Polls | ಮಹಿಳೆಯರಿಗೆ ₹2,500 ಮಾಸಿಕ ನೆರವು, ₹500ಗೆ LPG: ಬಿಜೆಪಿ ಭರವಸೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 10:37 IST
Last Updated 17 ಜನವರಿ 2025, 10:37 IST
<div class="paragraphs"><p>ಜೆ.ಪಿ. ನಡ್ಡಾ</p></div>

ಜೆ.ಪಿ. ನಡ್ಡಾ

   

ಪಿಟಿಐ ಚಿತ್ರ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಗೆದ್ದು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ ₹2,500 ನೆರವು ನೀಡುವುದಾಗಿ ಘೋಷಿಸಿದೆ.

ADVERTISEMENT

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಕ್ಷದ ಪ್ರಣಾಳಿಕೆ ‘ಸಂಕಲ್ಪ ಪತ್ರ’ದ ಮೊದಲ ಭಾಗವನ್ನು ಶುಕ್ರವಾರ ಬಿಡುಗಡೆಗೊಳಿಸಿದ್ದು, ಮತದಾರರಿಗೆ ಹಲವು ಭರವಸೆಗಳನ್ನು ನೀಡಲಾಗಿದೆ.

ಎಲ್ಲ ಗರ್ಭಿಣಿಯರಿಗೆ ₹21,000 ನೆರವು, ಹಿರಿಯ ನಾಗರಿಕರಿಗೆ ₹2,500 ಪಿಂಚಣಿ ಮತ್ತು ಬಡವರಿಗೆ ₹500ಕ್ಕೆ ಅಡುಗೆ ಅನಿಲ ಸಿಲಿಂಡರ್‌ ನೀಡುವುದಾಗಿಯೂ ಘೋಷಿಸಿದೆ.

ಬಿಜೆಪಿಯು ಅಧಿಕಾರಕ್ಕೆ ಬಂದರೆ ಈಗ ಇರುವ ಎಲ್ಲ ಜನ ಕಲ್ಯಾಣ ಯೋಜನೆಗಳನ್ನು ಮುಂದುವರಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ರಾಷ್ಟ್ರದ ರಾಜಧಾನಿಯಲ್ಲಿ 1998ರಿಂದಲೂ ಅಧಿಕಾರದಿಂದ ಹೊರಗುಳಿದಿರುವ ಬಿಜೆಪಿ, ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎ‍ಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

ಜ.6ರಂದು ‘ಪ್ಯಾರಿ ದೀದಿ ಯೋಜನೆ’ಯನ್ನು ಪ್ರಕಟಿಸಿದ್ದ ಕಾಂಗ್ರೆಸ್‌, ಮಹಿಳೆಯರಿಗೆ ಮಾಸಿಕ ₹2,500 ನೀಡುವುದಾಗಿ ಘೋಷಿಸಿತ್ತು. ಎಎಪಿಯು ಮಾಸಿಕ ₹2,100 ನೀಡುವುದಾಗಿ ಘೋಷಿಸಿದೆ.

ಉಚಿತ ಕೊಡುಗೆಗಳನ್ನು ನೀಡುವುದು ದೇಶಕ್ಕೆ ಒಳ್ಳೆಯದು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇನ್ನಾದರೂ ಒಪ್ಪಿಕೊಳ್ಳಲಿ
ಅರವಿಂದ ಕೇಜ್ರಿವಾಲ್‌ ಎಎಪಿ ಮುಖ್ಯಸ್ಥ

ಇತರ ಭರವಸೆಗಳು...

  • ದೀಪಾವಳಿ ಮತ್ತು ಹೋಳಿ ಹಬ್ಬದ ಸಂದರ್ಭದಲ್ಲಿ ಉಚಿತ ಅಡುಗೆ ಅನಿಲ ಸಿಲಿಂಡರ್

  • 60–70 ವರ್ಷದೊಳಗಿನ ಹಿರಿಯ ನಾಗರಿಕರಿಗೆ ಮಾಸಿಕ ₹ 2500 ಪಿಂಚಣಿ

  • 70 ವರ್ಷಕ್ಕಿಂತ ಮೇಲ್ಪಟ್ಟವರು ವಿಧವೆಯರು ಮತ್ತು ಅಂಗವಿಕಲರಿಗೆ ಮಾಸಿಕ ₹ 3000 ಪಿಂಚಣಿ

  • ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಆರು ಕಿಟ್‌ಗಳು

  • ನವದೆಹಲಿಯಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.