ಕಣ್ಣೂರು: ಸಿಪಿಎಂ ಕಾರ್ಯಕರ್ತನ ಹತ್ಯೆ ಪ್ರಕರಣದ ಆರೋಪಿಗಳಾಗಿದ್ದ ಒಂಬತ್ತು ಮಂದಿ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಇಲ್ಲಿನ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.
‘ಪೊಲೀಸ್ ತನಿಖೆಯಲ್ಲಿ ಗಂಭೀರ ಲೋಪಗಳಾಗಿವೆ’ ಎಂಬುದನ್ನು ಉಲ್ಲೇಖಿಸಿ ನ್ಯಾಯಾಲಯವು ಈ ಆದೇಶ ಹೊರಡಿಸಿದೆ.
2015ರಲ್ಲಿ ಕಣ್ಣೂರಿನ ಚಿಟ್ಟಾರಿಪರಂಬದಲ್ಲಿ ಪ್ರೇಮನ್ (45) ಎಂಬವರ ಮೇಲೆ ಗುಂಪೊಂದು ದಾಳಿ ಮಾಡಿತ್ತು. ನಂತರ ಆಸ್ಪತ್ರೆಯಲ್ಲಿ ಪ್ರೇಮನ್ ಸಾವಿಗೀಡಾದರು.
ಸಜೇಶ್ ಸಿ, ಪ್ರಜೇಶ್ ಡಿ, ಇಂಚಿಕಂಡಿ ನಿಶಾಂತ್, ಲಿಜಿನ್ ಪಿ., ಮನ್ಪಡ್ಡಿ ವಿನೀಶ್, ಸಿ. ರಾಜೇಶ್, ನಿಖಿಲ್ ಎನ್., ಆರ್. ರಮೇಶ್ ಹಾಗೂ ರಂಜಿತ್ ಸಿ.ವಿ. ಈ ಪ್ರಕರಣದಲ್ಲಿ ಖುಲಾಸೆಗೊಂಡವರು.
ಇನ್ನೊಬ್ಬ ಆರೋಪಿ ಶ್ಯಾಮ್ ಪ್ರಸಾದ್ , 2018ರಲ್ಲಿ ನಡೆದ ರಾಜಕೀಯ ಘರ್ಷಣೆಯಲ್ಲಿ ಕೊಲೆಯಾದರು ಎಂದು ವಕೀಲರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.