ಜೈಪುರ: ರಾಜಸ್ಥಾನ ಬಿಜೆಪಿಯ ಪ್ರಮುಖ ನಾಯಕ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಆಪ್ತ ಪ್ರಹ್ಲಾದ್ ಗುಂಜಲ್ (63) ಅವರು ಕಾಂಗ್ರೆಸ್‌ಗೆ ಗುರುವಾರ ಸೇರ್ಪಡೆಯಾದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಎದುರು ಅವರನ್ನು ಕಾಂಗ್ರೆಸ್ ಕಣಕ್ಕಿಳಿಸುವ ನಿರೀಕ್ಷೆ ಇದೆ.
ಪ್ರಹ್ಲಾದ್ ಅವರು ಕೋಟಾ, ಬೂಂದಿ, ಬಾರಾ ಮತ್ತು ಝಾಲಾವಾಡ ಜಿಲ್ಲೆಗಳನ್ನು ಒಳಗೊಂಡಿರುವ ಹಾಡೋತಿ ಪ್ರದೇಶದ ಪ್ರಭಾವಿ ನಾಯಕರು. ಅವರ ಹಾಗೆ ತಳಮಟ್ಟದಿಂದ ಬಂದಂಥ ನಾಯಕರನ್ನು ಬಿಜೆಪಿಯು ವ್ಯವಸ್ಥಿತವಾಗಿ ತುಳಿಯುತ್ತಿದೆ ಎಂದು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ
ಗೋವಿಂದ್ ಸಿಂಗ್ ಡೊಟಾಸ್ರಾ ಅವರು ಪ್ರಹ್ಲಾದ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ವೇಳೆ ಹೇಳಿದರು.
ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರನ್ನು ಉಲ್ಲೇಖಿಸಿ, ‘ನಾನು ಯಾವ ನಾಯಕರಿಗೂ ಕಿರಿಯನಲ್ಲ. ನಾನು ಮೊದಲಬಾರಿಗೆ ಶಾಸಕನಾಗಿದ್ದಾಗ, ಸದ್ಯದ ಮುಖ್ಯಮಂತ್ರಿಯು ಸರಪಂಚನಾಗಲು ಪ್ರಯತ್ನಿಸುತ್ತಿದ್ದರು. ನಾನು ಎರಡನೇ ಬಾರಿಗೆ ಶಾಸಕನಾದ ವೇಳೆ ಅವರು ಪಂಚಾಯತಿ ಸಮಿತಿಯ ಅಧ್ಯಕ್ಷರಾಗಲು ಪ್ರಯತ್ನಿಸುತ್ತಿದ್ದರು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.