ADVERTISEMENT

ಪಶ್ಚಿಮ ಬಂಗಾಳ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಮಿಕ್ ಭಟ್ಟಾಚಾರ್ಯ ಅವಿರೋಧ ಆಯ್ಕೆ

ಪಿಟಿಐ
Published 2 ಜುಲೈ 2025, 12:02 IST
Last Updated 2 ಜುಲೈ 2025, 12:02 IST
<div class="paragraphs"><p>ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಮಿಕ್ ಭಟ್ಟಾಚಾರ್ಯ (ಮಧ್ಯದಲ್ಲಿರುವವರು) ಅವರು ಬುಧವಾರ ನಾಮಪತ್ರ ಸಲ್ಲಿಸಿದರು.&nbsp;ಸುಕಂತಾ ಮಜೂಮದಾರ್‌ ಮತ್ತು&nbsp;ಸುವೇಂದು ಅಧಿಕಾರಿ ಇದ್ದಾರೆ.</p></div>

ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಮಿಕ್ ಭಟ್ಟಾಚಾರ್ಯ (ಮಧ್ಯದಲ್ಲಿರುವವರು) ಅವರು ಬುಧವಾರ ನಾಮಪತ್ರ ಸಲ್ಲಿಸಿದರು. ಸುಕಂತಾ ಮಜೂಮದಾರ್‌ ಮತ್ತು ಸುವೇಂದು ಅಧಿಕಾರಿ ಇದ್ದಾರೆ.

   

ಎಕ್ಸ್ ಚಿತ್ರ

ಕೋಲ್ಕತ್ತ: ಬಿಜೆಪಿಯ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸಮಿಕ್ ಭಟ್ಟಾಚಾರ್ಯ ಅವರು ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. 

ADVERTISEMENT

ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಇವರೊಬ್ಬರೇ ಅರ್ಜಿ ಸಲ್ಲಿಸಿದ್ದರಿಂದ, ಆಯ್ಕೆಯೂ ಅವಿರೋಧವಾಗಿ ಇಂದು (ಬುಧವಾರ) ನೆರವೇರಿತು.

ನಿರ್ಗಮಿತ ರಾಜ್ಯಾಧ್ಯಕ್ಷ ಸುಕಂತಾ ಮಜೂಮದಾರ್‌ ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರೊಂದಿಗೆ ಕೋಲ್ಕತ್ತದಲ್ಲಿರುವ ಬಿಜೆಪಿಯ ಸಾಲ್ಟ್‌ ಲೇಕ್‌ ಕಚೇರಿಗೆ ಬುಧವಾರ ಮಧ್ಯಾಹ್ನ ಭೇಟಿ ನೀಡಿದ ಸಮಿಕ್, ನಾಮಪತ್ರ ಸಲ್ಲಿಸಿದರು.

ರಾಜ್ಯಾಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ ಅವಕಾಶ ನೀಡಲಾಗಿತ್ತು. ನಾಮಪತ್ರ ಪರಿಷ್ಕರಣೆ ಹಾಗೂ ಹಿಂಪಡೆಯಲು ಸಂಜೆ 6ರವರೆಗೆ ಅವಕಾಶವಿತ್ತು. ಆದರೆ ಸಮಿಕ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಪಕ್ಷವು ಸಮಿಕ್ ಹೆಸರನ್ನು ಅಂತಿಮಗೊಳಿಸಿತು.

ವಿಜ್ಞಾನ ನಗರಿಯಲ್ಲಿ ಇಂದು (ಬುಧವಾರ) ಸಂಜೆ ನಡೆಯಲಿರುವ ಪಕ್ಷದ ವೇದಿಕೆ ಕಾರ್ಯಕ್ರಮದಲ್ಲಿ ಸಮಿಕ್ ಅವರ ಹೆಸರನ್ನು ಪಕ್ಷದ ಮುಖಂಡರು ಅಧಿಕೃತವಾಗಿ ಘೋಷಿಸುವ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮ ಆಯೋಜನೆಗೊಂಡಿದೆ ಎಂದು ಮೂಲಗಳು ತಿಳಿಸಿವೆ.

2026ರಲ್ಲಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಪಕ್ಷದ ಸಂಘಟನೆಗೆ ಬಿಜೆಪಿ ಒತ್ತು ನೀಡಿದ್ದು, ಆ ಉದ್ದೇಶದಿಂದಲೂ ಸಮಿಕ್ ಭಟ್ಟಾಚಾರ್ಯ ಅವರ ಆಯ್ಕೆ ನಡೆದಿದೆ ಎಂದೆನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.