ADVERTISEMENT

ಮತಗಟ್ಟೆ ಸಮೀಕ್ಷೆ: ದೆಹಲಿಯಲ್ಲಿ ಏಳು ಸೀಟು ಗೆಲ್ಲಲಿದೆ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 20 ಮೇ 2019, 5:12 IST
Last Updated 20 ಮೇ 2019, 5:12 IST
   

ನವದೆಹಲಿ: ಇಂಡಿಯಾ ಟುಡೇ- ಏಕ್ಸಿಸ್ ಮೈ ಇಂಡಿಯಾ ಮತಗಟ್ಟೆ ಸಮೀಕ್ಷೆ ಪ್ರಕಾರ ದೆಹಲಿಯಲ್ಲಿ ಬಿಜೆಪಿ 6-7 ಸೀಟುಗಳನ್ನು ಗೆಲ್ಲಲಿದೆ.

ಕಾಂಗ್ರೆಸ್ 1 ಸೀಟು ಗೆಲ್ಲಲಿದ್ದು, ಆಮ್ ಆದ್ಮಿ ಪಕ್ಷ ಯಾವುದೇ ಸೀಟುಗಳಲ್ಲಿ ಗೆಲುವುಸಾಧಿಸುವುದಿಲ್ಲ.

2014ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ7 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.

ADVERTISEMENT

ನೋಟು ರದ್ದತಿ, ಜಿಎಸ್‌ಟಿ ಮೊದಲಾದ ವಿಷಯಗಳು ಬಿಜೆಪಿಯ ಗೆಲುವನ್ನು ಬಾಧಿಸಲಿದೆ ಎಂದೇ ಹೇಳಲಾಗುತ್ತಿತ್ತು. ಆದರೆ ಭಾನುವಾರ ಪ್ರಕಟವಾದ ಬಹುತೇಕ ಮತಗಟ್ಟೆ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೇರಲಿದೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.