
ಪ್ರಜಾವಾಣಿ ವಾರ್ತೆ
ಬಿಜೆಪಿ ಸಂಸದ ರಮೇಶ್ ಬಿಧೂಢಿ ಹಾಗೂ ಬಿಎಸ್‌ಪಿ ಸಂಸದ ಡ್ಯಾನಿಷ್ ಅಲಿ (ಬಲ)
ಪಿಟಿಐ ಚಿತ್ರ
ನವದೆಹಲಿ: ಆಕ್ಷೇಪಾರ್ಹವಾದ ಹೇಳಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿಯು ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಮತ್ತು ಬಿಜೆಪಿ ಸಂಸದ ರಮೇಶ್ ಬಿಧೂಢಿ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.
ಡಿಸೆಂಬರ್ 7ರಂದು ಸಮಿತಿಯ ಮುಂದೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸುವಂತೆ ಅಲಿ ಮತ್ತು ಬಿಧೂಢಿ ಅವರಿಗೆ ಸಮಿತಿ ಸೂಚಿಸಿದೆ. ಈ ಹಿಂದೆ ಬಿಧೂಢಿ ಅವರಿಗೆ ಅಕ್ಟೋಬರ್ 10ರಂದು ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ, ರಾಜಸ್ಥಾನದ ಚುನಾವಣೆ ಕಾರಣವೊಡ್ಡಿ ಅವರು ಗೈರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.