ನೋಯ್ಡಾ: ವಾಮಾಚಾರದ ಆರೋಪದಡಿ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್ ಮನೆಗೆ ನುಗ್ಗಲೆತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಗುಜರಾತ್‌ನ ಸುರೇಂದರ್ ನಗರದ ನಿವಾಸಿ ತೇಜಸ್ ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ 7ರ ಸುಮಾರಿಗೆ ಸೀಮಾ ಮನೆಗೆ ನುಗ್ಗಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತೇಜಸ್ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಜರಾತ್‌ನಿಂದ ನವದೆಹಲಿಗೆ ಹೋಗುವ ರೈಲಿನ ಮೂಲಕ ಬಂಧಿದ್ದ ಆತ ಅಲ್ಲಿಂದ ನೋಯ್ಡಾ ಬಳಿಯ ಸೀಮಾ ಹೈದರ್ ಇರುವ ಗ್ರಾಮಕ್ಕೆ ಬಸ್ ಮೂಲಕ ತೆರಲಿದ್ದಾನೆ. ಆತನ ಕ ಗ್ರಾಮಕ್ಕೆ ತಲುಪಿದರು. ಅವನ ಮೊಬೈಲ್ ಫೋನ್‌ನಲ್ಲಿ ಸೀಮಾ ಸ್ಕ್ರೀನ್‌ಶಾಟ್‌ಗಳಿವೆ ಎಂದು ರಬುಪುರ ಕೊತ್ವಾಲಿ ಠಾಣಾಧಿಕಾರಿ ಸುಜೀತ್ ಉಪಾಧ್ಯಾಯ ಪಿಟಿಐಗೆ ತಿಳಿಸಿದ್ದಾರೆ.
ಭಾರತಕ್ಕೆ ಆಗಮಿಸುವ ಸಮಯದಲ್ಲಿ ಸೀಮಾ ತನ್ನ ಮೇಲೆ ಮಾಟಮಂತ್ರ ಮಾಡಿದ್ದಾರೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ" ಎಂದು ಉಪಾಧ್ಯಾಯ ಹೇಳಿದರು.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಾಕೋಬಾಬಾದ್‌ನ 32 ವರ್ಷದ ಸೀಮಾ ಹೈದರ್, ಮೇ 2023ರಲ್ಲಿ ಕರಾಚಿಯಿಂದ ತನ್ನ ಮಕ್ಕಳನ್ನು ಕರೆದುಕೊಂಡು ನೇಪಾಳದ ಮೂಲಕ ಭಾರತಕ್ಕೆ ಪ್ರಯಾಣಿಸಿದ್ದರು. ಅದೇ ವರ್ಷ ಜುಲೈನಲ್ಲಿ ಭಾರತೀಯ ಅಧಿಕಾರಿಗಳು ಗ್ರೇಟರ್ ನೋಯ್ಡಾ ಪ್ರದೇಶದಲ್ಲಿ 27 ವರ್ಷದ ಸಚಿನ್ ಮೀನಾ ಅವರೊಂದಿಗೆ ಸೀಮಾ ವಾಸಿಸುತ್ತಿರುವುದು ಗೊತ್ತಾಗಿದೆ. ಈಗ ವಿವಾಹವಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಸೀಮಾ ಅವರಿಗೆ ಪಾಕಿಸ್ತಾನಿ ಪತಿ ಗುಲಾಮ್ ಹೈದರ್ ಅವರಿಂದ ನಾಲ್ಕು ಮಕ್ಕಳಿದ್ದು, ಸಚಿನ್ ಅವರೊಂದಿಗೆ ಒಬ್ಬಳು ಮಗಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.