
ಅರುಣ್ ಗವಳಿ ಜೊತೆ ಪತ್ನಿ ಆಶಾ ಗವಳಿ ಮಕ್ಕಳಾದ ಗೀತಾ, ಯೋಗಿತಾ ಗವಳಿ
ಮುಂಬೈ: ಭೂಗತ ಮಾಜಿ ಪಾತಕಿ ಹಾಗೂ ಮಾಜಿ ಶಾಸಕ ಅರುಣ್ ಗವಳಿ ಅವರ ಇಬ್ಬರು ಪುತ್ರಿಯರಾದ ಗೀತಾ ಹಾಗೂ ಯೋಗಿತಾ ಅವರು ಬ್ರಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಸೋಲುಂಡಿದ್ದಾರೆ.
ಇಬ್ಬರೂ ಕೂಡ ತಂದೆ ಸ್ಥಾಪಿಸಿದ್ದ ಅಖಿಲ್ ಭಾರತೀಯ ಸೇನಾ(ಎಬಿಎಚ್‌ಎಸ್)ನಿಂದ ಕಣಕ್ಕಿಳಿದಿದ್ದರು.
ಮೂರು ಅವಧಿಗೆ ಬಿಎಂಸಿಯ ಕಾರ್ಪೊರೇಟರ್ ಆಗಿದ್ದ ಗೀತಾ ಅವರು ವಾರ್ಡ್ 212ರಿಂದ ಸ್ಪರ್ಧಿಸಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಅಮ್ರಿನ್ ಶೆಹಜಾದ್ ವಿರುದ್ಧ ಸೋಲುಂಡಿದ್ದು, ಮೊದಲ ಬಾರಿಗೆ ಸ್ಪರ್ಧಿಸಿದ್ದ ಯೋಗಿತಾ ವಾರ್ಡ್ 207ರಲ್ಲಿ ಸ್ಪರ್ಧಿಸಿ ಬಿಜೆಪಿಯ ರೋಹಿದಾಸ್ ಲೊಖಂಡೆ ವಿರುದ್ಧ ಪರಾಭವಗೊಂಡರು.
2007ರಲ್ಲಿ ಶಿವಸೇನಾ ಕಾರ್ಪೋರೆಟರ್ ಆಗಿದ್ದ ಕಮ್ಲಾಕರ್ ಜಮ್‌ಶಂಡೆಕರ್ ಅವರನ್ನು ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಗವಳಿ, ನಾಗಪುರ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಜಾಮೀನು ನೀಡಿದ ಬಳಿಕ ಜೈಲಿನಿಂದ ಹೊರಬಂದಿದ್ದರು.
ಅರುಣ್ ಗವಳಿ 2004 ರಿಂದ 2009ರ ತನಕ ಚಿಂಛ್‌ಪೊಕ್ಲಿ ಕ್ಷೇತ್ರದಿಂದ ಶಾಸಕರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.