ವಿಜಯವಾಡ: ಶಾಲೆ–ಕಾಲೇಜುಗಳಿಂದ ಮನೆ ಕಡೆಗೆ ಹೊರಟ್ಟಿದ್ದ ವಿದ್ಯಾರ್ಥಿಗಳನ್ನು ಹೊತ್ತಿದ್ದ ನಾಡ ದೋಣಿ ಸಂಜೆ 5 ಗಂಟೆ ಸುಮಾರಿಗೆ ಪೂರ್ವ ಗೋದಾವರಿಯ ನದಿ ವಲಯದಲ್ಲಿ ಮಗುಚಿಕೊಂಡಿದೆ.
ದೋಣಿಯಲ್ಲಿ ಸುಮಾರು 40 ಮಂದಿ ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿದ್ದು, ಈ ವರೆಗೂ 10 ಜನರನ್ನು ರಕ್ಷಿಸಲಾಗಿದೆ.
ಕಾಮಗಾರಿ ಹಂತದಲ್ಲಿರುವ ಸೇತುವೆಯ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಡ ದೋಣಿ ಮಗುಚಿರುವುದಾಗಿ ದಿ ಹಿಂದು ವರದಿ ಮಾಡಿದೆ. ಸ್ಥಳೀಯರು 10 ಮಂದಿಯನ್ನು ರಕ್ಷಿಸಿದ್ದು, ಉಳಿದವರ ರಕ್ಷಣೆಗಾಗಿ ಪ್ರಯತ್ನ ನಡೆದಿದೆ. ನದಿ ರಭಸವಾಗಿ ಹರಿಯುತ್ತಿರುವುದು ಹಾಗೂ ಕತ್ತಲು ಆವರಿಸಿರುವುದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಪಡಿಸಿದೆ.
ವಿಶಾಖಪಟ್ಟಣ ಮತ್ತು ರಾಜಮಹೇಂದ್ರವರಮನ್‌ನಿಂದ ವಿಪತ್ತು ನಿರ್ವಹಣಾ ತಂಡದ 35 ಸದಸ್ಯರು ಮುಂದಿನ ರಕ್ಷಣಾ ಕಾರ್ಯ ನಡೆಸಲಿದ್ದಾರೆ.
2017ರ ಮೇನಲ್ಲಿ ಪೊಲವರ್ಮನ್ ಗ್ರಾಮದ ಸಮೀಪ 40 ಜನರಿದ್ದ ದೋಣಿ ಮಗುಚಿ 20 ಮಂದಿ ಸಾವಿಗೀಡಾಗಿದ್ದರು,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.