ADVERTISEMENT

ಬಾಷ್‌ ಅಧ್ಯಕ್ಷವಿಶ್ವನಾಥನ್‌ರಾಜೀನಾಮೆ

ಪಿಟಿಐ
Published 16 ಆಗಸ್ಟ್ 2019, 20:45 IST
Last Updated 16 ಆಗಸ್ಟ್ 2019, 20:45 IST
   

ನವದೆಹಲಿ : ವಾಹನ ಬಿಡಿಭಾಗ ತಯಾರಿಸುವ ಪ್ರಮುಖ ಸಂಸ್ಥೆ ಬಾಷ್‌ ಲಿಮಿಟೆಡ್‌ ಅಧ್ಯಕ್ಷ ವಿ. ಕೆ. ವಿಶ್ವನಾಥನ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ವಿಶ್ವನಾಥನ್‌ ಅವರು, ನಿರ್ದೇಶಕ ಮಂಡಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅಧ್ಯಕ್ಷರನ್ನಾಗಿ ಹೊಸಬರನ್ನು ನೇಮಿಸುವ ಪ್ರಕ್ರಿಯೆಯ ಭಾಗವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಇದೇ 23ರಿಂದ ಇದು ಜಾರಿಗೆ ಬರಲಿದೆ. ಎರಡು ದಶಕಗಳ ಕಾಲ ಅವರು ಕಂಪನಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ವಾಹನ ಉದ್ದಿಮೆಯಲ್ಲಿ ಮಾರಾಟ ಕುಸಿದಿರುವ ಕಾರಣಕ್ಕೆ ಬಾಷ್‌ ತನ್ನ ಎರಡು ತಯಾರಿಕಾ ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಮತ್ತು ನೌಕರರ ಮರುನಿಯೋಜನೆ ಮಾಡುತ್ತಿರುವ ಸಂದರ್ಭ ದಲ್ಲಿ ಈ ಬೆಳವಣಿಗೆ ನಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.