ADVERTISEMENT

ಆನ್‌ಲೈನ್‌ ಗೇಮ್‌ನಲ್ಲಿ ₹ 40 ಸಾವಿರ ಕಳೆದುಕೊಂಡ ಬಾಲಕ ಆತ್ಮಹತ್ಯೆಗೆ ಶರಣು

ಪಿಟಿಐ
Published 31 ಜುಲೈ 2021, 6:29 IST
Last Updated 31 ಜುಲೈ 2021, 6:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಛತ್ತಾರ್‌ಪುರ(ಮಧ್ಯಪ್ರದೇಶ): ಆನ್‌ಲೈನ್‌ ಗೇಮ್‌ನಲ್ಲಿ ₹40 ಸಾವಿರ ಕಳೆದುಕೊಂಡಿದ್ದಕ್ಕೆ ಬೇಸರಗೊಂಡ 13 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಛತ್ತಾರ್‌ಪುರ ನಗರದಲ್ಲಿ ಶುಕ್ರವಾರ ನಡೆದಿದೆ.

ಖಾಸಗಿ ಶಾಲೆಯೊಂದರಲ್ಲಿ 6ನೇ ತರಗತಿ ಓದುತ್ತಿರುವ ಈ ಬಾಲಕ ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿಟ್ಟಿದ್ದಾನೆ. ಪತ್ರದಲ್ಲಿ, ‘ಫ್ರೀ ಫೈರ್‌ ಗೇಮ್‌ ಆಡುವುದಕ್ಕಾಗಿ ₹40 ಸಾವಿರ ವ್ಯರ್ಥ ಮಾಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ತಾಯಿಯಲ್ಲಿ ಕ್ಷಮೆ ಕೇಳಿದ್ದಾನೆ‘ ಎಂದು ಡೆಪ್ಯುಟಿ ಸೂಪರಿಂಟೆಂಡ್ ಆಫ್ ಪೊಲೀಸ್ (ಡಿಎಸ್‌ಪಿ)ಶಶಾಂಕ್ ಜೈನ್ ತಿಳಿಸಿದ್ದಾರೆ.

ತಂದೆ ಪ್ಯಾಥಾಲಜಿ ಲ್ಯಾಬ್ ನಡೆಸುತ್ತಿದ್ದಾರೆ. ತಾಯಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಾರೆ. ಈ ಬಾಲಕ ಗೇಮ್‌ ಆಡುವುದಕ್ಕಾಗಿ ತನ್ನ ತಾಯಿಯ ಖಾತೆಯಿಂದ ₹40 ಸಾವಿರ ಪಡೆದುಕೊಂಡಿದ್ದಾನೆ. ಈ ಹಣ ಪಡೆದ ನಂತರ, ತಾಯಿಯ ಮೊಬೈಲ್‌ಗೆ ಸಂದೇಶ ಬಂದಿದೆ. ಹಣ ಪಡೆದಿರುವ ಬಗ್ಗೆ ತಾಯಿ ಮಗನನ್ನು ಗದರಿದ್ದಾರೆ. ಇದರಿಂದ ಬೇಸರಗೊಂಡು ಖಿನ್ನತೆ ಒಳಗಾದ ಬಾಲಕ ಯಾರೂ ಇಲ್ಲದ ಸಮಯದಲ್ಲಿ ಮನೆಯ ಕೋಣೆಯೊಂದರಲ್ಲಿ, ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಇಂಥದ್ದೇ ಘಟನೆಯೊಂದು ಈ ವರ್ಷದ ಜನವರಿಯಲ್ಲಿ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಧಾನಾ ಪಟ್ಟಣದಲ್ಲಿ ನಡೆದಿತ್ತು. ಇದೇ ‘ಫ್ರೀ ಫೈರ್‌’ ಗೇಮ್‌ ಆಡುವುದಕ್ಕೆ ತಂದೆ ಅಡ್ಡಿಯುಂಟು ಮಾಡಿದರು ಎಂಬ ಕಾರಣಕ್ಕೆ 12 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.