ADVERTISEMENT

ದೇಶದ ಆಂತರಿಕ ಭದ್ರತೆ ವಿಚಾರದಲ್ಲಿ ಡಿಪಿಆರ್‌ಡಿ ಪಾತ್ರ ಮಹತ್ವದ್ದು: ಅಮಿತ್ ಶಾ

ಏಜೆನ್ಸೀಸ್
Published 28 ಆಗಸ್ಟ್ 2020, 11:53 IST
Last Updated 28 ಆಗಸ್ಟ್ 2020, 11:53 IST
 ಕೇಂದ್ರ ಗೃಹ ಸಚಿವ ಅಮಿತ್‌ ಶಾ
ಕೇಂದ್ರ ಗೃಹ ಸಚಿವ ಅಮಿತ್‌ ಶಾ   

ನವದೆಹಲಿ:ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸುವಲ್ಲಿ ಪೊಲೀಸ್‌ ಸಂಶೋಧನೆ ಮತ್ತು ಅಭಿವೃದ್ಧಿ ದಳದ (ಬಿಪಿಆರ್‌‌ಡಿ) ಪಾತ್ರ ಮಹತ್ವದ್ದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹೇಳಿದ್ದಾರೆ.ಬಿಪಿಆರ್‌‌ಡಿಯ ಸುವರ್ಣ ಮಹೋತ್ಸವದ ಅಂಗವಾಗಿ ಅವರು ಟ್ವೀಟ್‌ ಮಾಡಿದ್ದಾರೆ.

‘ಬಿಪಿಆರ್‌‌ಡಿಗೆ ಸುವರ್ಣ ಮಹೋತ್ಸವದ ಶುಭಾಶಯಗಳು.ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸುವಲ್ಲಿ ಬಿಪಿಆರ್‌‌ಡಿ ಪಾತ್ರ ದೊಡ್ಡದು. ದೇಶದಲ್ಲಿ ಸಮರ್ಥ ಹಾಗೂ ಆಧುನಿಕ ಪೊಲೀಸ್‌ ವ್ಯವಸ್ಥೆಗಾಗಿ ನಿರಂತರ ಅನ್ವೇಷಣೆ ನಡೆಸಿದ ಬಿಪಿಆರ್‌ಡಿಗೆ ಗೌರವ ಸಲ್ಲಿಸುತ್ತೇನೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಸಂಸ್ಥೆಯ ಬಗ್ಗೆಮಾಹಿತಿ ಹಂಚಿಕೊಂಡಿದ್ದ ಬಿಪಿಆರ್‌ಡಿ, ‘ತ್ವರಿತ, ಉತ್ಕೃಷ್ಟ ಹಾಗೂ ಸಮಸ್ಯೆಗಳ ವ್ಯವಸ್ಥಿತ ಅಧ್ಯಯನ, ಪೊಲೀಸ್‌ ವ್ಯವಸ್ಥೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಿರ್ಣಯದೊಂದಿಗೆಕೇಂದ್ರಗೃಹ ಸಚಿವಾಲಯ ಆಗಸ್ಟ್‌ 28, 1970ರಂದು ಬಿಪಿಆರ್‌‌ಡಿಯನ್ನು ಸ್ಥಾಪಿಸಿತ್ತು.ಆರಂಭದಲ್ಲಿ ಎರಡು ವಿಭಾಗಗಳನ್ನು ಸ್ಥಾಪಿಸಲಾಗಿತ್ತು. ಅಂದರೆ, ಸಂಶೋಧನೆ, ಪ್ರಕಟಣೆ ಮತ್ತು ಅಂಕಿಅಂಶ ವಿಭಾಗ ಹಾಗೂ ಅಭಿವೃದ್ಧಿ ವಿಭಾಗಗಳಿದ್ದವು’

ADVERTISEMENT

‘1973ರಲ್ಲಿ ತರಬೇತಿ ವಿಭಾಗ ಸೇರ್ಪಡೆಗೊಂಡಿತ್ತು. ಕಾರಾಗೃಹಗಳ ಸಮಸ್ಯೆ ಹಾಗೂ ಅವುಗಳ ಸುಧಾರಣೆಗಾಗಿ 1995ರಲ್ಲಿ ತಿದ್ದುಪಡಿ ವಿಭಾಗವನ್ನು ಆರಂಭಿಸಲಾಗಿತ್ತು. 2008ರಲ್ಲಿ ರಾಷ್ಟ್ರೀಯ ಪೊಲೀಸ್ ಮಿಷನ್‌ ಮತ್ತು ಅಭಿವೃದ್ಧಿ ವಿಭಾಗವನ್ನು ಆಧುನಿಕರಣ ವಿಭಾಗವನ್ನಾಗಿ ಪುನರ್‌ರಚಿಸಲಾಯಿತು’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.