ADVERTISEMENT

ಮಕ್ಕಳ ಶೌರ್ಯ ಪ್ರಶಸ್ತಿ: ಸರ್ಕಾರದಿಂದಲೇ ನೇರ ಆಯ್ಕೆ

ಪಿಟಿಐ
Published 20 ಜನವರಿ 2019, 20:00 IST
Last Updated 20 ಜನವರಿ 2019, 20:00 IST
   

ನವದೆಹಲಿ: ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಮಕ್ಕಳ ಆಯ್ಕೆ ಪ್ರಕ್ರಿಯೆಯನ್ನು ಈ ವರೆಗೆ ಎನ್‌ಜಿಒವೊಂದು ನಡೆಸುತ್ತಿತ್ತು. ಇನ್ನು ಮುಂದೆ ಸರ್ಕಾರವೇ ಈ ಹೊಣೆ ನಿರ್ವಹಿಸಲಿದೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಇಂಡಿಯನ್‌ ಕೌನ್ಸಿಲ್‌ ಫಾರ್‌ ಚೈಲ್ಡ್‌ ವೆಲ್‌ಫೇರ್‌ (ಐಸಿಸಿಡಬ್ಲ್ಯು) ಎಂಬ ಎನ್‌ಜಿಒ ಶೌರ್ಯ ಪ್ರಶಸ್ತಿಗೆ ಮಕ್ಕಳ ಆಯ್ಕೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಂಘಟನೆಯ ಹೊಣೆಯನ್ನು1957ರಿಂದಲೂ ನಿರ್ವಹಿಸುತ್ತಾ ಬಂದಿದೆ. ಆದರೆ, ಹಣಕಾಸಿನ ವಿಚಾರದಲ್ಲಿ ಈ ಸಂಸ್ಥೆಯ ಪ್ರಾಮಾಣಿಕತೆಯ ಬಗ್ಗೆ ದೆಹಲಿ ಹೈಕೋರ್ಟ್‌ ಇತ್ತೀಚೆಗೆ ಪ್ರಶ್ನೆಗಳನ್ನು ಎತ್ತಿತ್ತು.

ಹಾಗಾಗಿ, ಈ ಸಂಸ್ಥೆಯಿಂದ ಅಂತರ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ADVERTISEMENT

ಪ್ರಶಸ್ತಿ ನೀಡಿಕೆಯ ಒಟ್ಟು ಸ್ವರೂಪವನ್ನೇ ಪುನರ್‌ರಚಿಸಲಾಗಿದೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಮಕ್ಕಳ ಪ್ರಶಸ್ತಿಯ ಜತೆಗೆ ಶೌರ್ಯ ಪ್ರಶಸ್ತಿಯನ್ನೂ ಸೇರಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.