ADVERTISEMENT

‘ಚೀನಾದಲ್ಲಿ ಸಿಲುಕಿಕೊಂಡಿರುವ 39 ನಾವಿಕರನ್ನು ಕರೆತನ್ನಿ’

ಪಿಟಿಐ
Published 31 ಡಿಸೆಂಬರ್ 2020, 15:08 IST
Last Updated 31 ಡಿಸೆಂಬರ್ 2020, 15:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಚೀನಾ ವ್ಯಾಪ್ತಿಯ ಸಮುದ್ರದಲ್ಲಿ ಸಿಲುಕಿಕೊಂಡಿರುವ 39 ಭಾರತೀಯ ನಾವಿಕರನ್ನು ಭಾರತಕ್ಕೆ ಕರೆತರಲು ಕ್ರಮವಹಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿವಸೇನಾ ಆಗ್ರಹಿಸಿದೆ.

ಈ ಕುರಿತು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರಿಗೆ ಪಕ್ಷದ ವಕ್ತಾರರಾದ, ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಪತ್ರ ಬರೆದಿದ್ದಾರೆ. ‘ಸಿಲುಕಿಕೊಂಡಿರುವ ನಾವಿಕರಿಗೆ ಕೇಂದ್ರದಿಂದ ಯಾವುದೇ ನೆರವು ದೊರೆತಿಲ್ಲ. ಅವರನ್ನು ಸಂಪರ್ಕಿಸಲು ಕುಟುಂಬ ಸದಸ್ಯರೂ ಕಷ್ಟಪಡುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಮಹಾರಾಷ್ಟ್ರದವರಾಗಿದ್ದಾರೆ’ ಎಂದಿದ್ದಾರೆ.

‘ಎಂವಿ ಅನಸ್ತೇಷಿಯಾ, ಎಂವಿ ಜಗ್‌ಆನಂದ್‌ ಹೆಸರಿನ ಎರಡು ಸರಕು ಸಾಗಣೆ ಹಡಗಿನಲ್ಲಿ 39 ಮಂದಿ ಭಾರತೀಯರಿದ್ದಾರೆ. ಇವು ಚೀನಾ ವ್ಯಾಪ್ತಿಯ ಸಮುದ್ರದಲ್ಲಿವೆ. ಸರಕನ್ನು ಇಳಿಸಲುಈ ಹಡಗುಗಳಿಗೆ ಅನುಮತಿ ನೀಡಿಲ್ಲ’ ಎಂದು ಗಮನಸೆಳೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.