ADVERTISEMENT

ಭಾರತ–ಮ್ಯಾನ್ಮಾರ್‌ ಗಡಿ ಪ್ರಮುಖ ಸ್ಥಳಗಳಲ್ಲಿ ಬೇಲಿ ಅಳವಡಿಸಲು ಕ್ರಮ

ಪಿಟಿಐ
Published 25 ಜನವರಿ 2024, 12:52 IST
Last Updated 25 ಜನವರಿ 2024, 12:52 IST
<div class="paragraphs"><p>ರಾಯಿಟರ್ಸ್ ಚಿತ್ರ</p></div>

ರಾಯಿಟರ್ಸ್ ಚಿತ್ರ

   

ಗುವಾಹಟಿ: ಭಾರತ–ಮ್ಯಾನ್ಮಾರ್‌ ಗಡಿಯುದ್ದಕ್ಕೂ ಪ್ರಮುಖ ಸ್ಥಳಗಳಲ್ಲಿ ಬೇಲಿ ಅಳವಡಿಸಲಾಗುವುದು ಎಂದು ಗಡಿ ರಸ್ತೆ ಸಂಘಟನೆ (ಬಿಆರ್‌ಒ) ತಿಳಿಸಿದೆ. ಈಗಾಗಲೇ 10 ಕಿ.ಮೀ.ನಷ್ಟು ಬೇಲಿ ಅಳವಡಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೃಹ ಸಚಿವಾಲಯವು ಈ ಗಡಿಯುದ್ದಕ್ಕೂ ಸುಮಾರು 1,700 ಕಿ.ಮೀ. ನಷ್ಟು ಬೇಲಿ ಅಳವಡಿಸಲು ನಿರ್ಧರಿಸಿದೆ ಎಂದು ಬಿಆರ್‌ಒದ ಹೆಚ್ಚುವರಿ ಮಹಾ ನಿರ್ದೇಶಕರಾದ (ಪೂರ್ವ) ಪಿ.ಕೆ.ಎಚ್‌.ಸಿಂಗ್ ಅವರು ಹೇಳಿದ್ದಾರೆ. ಸದ್ಯ ಮಣಿಪುರದ ಮೊರೆಹ್ ವ್ಯಾಪ್ತಿಯಲ್ಲಿ 10 ಕಿ.ಮೀ. ಬೇಲಿ ಹಾಕಿದ್ದು, ನಿರ್ವಹಣೆಯನ್ನು ಅಸ್ಸಾಂ ರೈಫಲ್ಸ್‌ಗೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. 

ADVERTISEMENT

ಭಾರತ ಮತ್ತು ಮ್ಯಾನ್ಮಾರ್‌ ಗಡಿಯ ವ್ಯಾಪ್ತಿ ಸುಮಾರು 1,643 ಕಿ.ಮೀ ಆಗಿದೆ. ಇದು ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌, ಮಣಿಪುರ ಮತ್ತು ಮಿಜೋರಾಂ ರಾಜ್ಯಗಳ ವ್ಯಾಪ್ತಿಯಲ್ಲಿ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.