ADVERTISEMENT

ಬಿ.ಎಸ್.ಎಫ್.ನಿಂದ 15ರಂದು ಸ್ವಾತಂತ್ರ್ಯದ ದಿನದ ನಡಿಗೆ ಕಾರ್ಯಕ್ರಮ

ಪಿಟಿಐ
Published 9 ಆಗಸ್ಟ್ 2020, 10:22 IST
Last Updated 9 ಆಗಸ್ಟ್ 2020, 10:22 IST

ನವದೆಹಲಿ: ಪಾಕಿಸ್ತಾನ, ಬಾಂಗ್ಲಾದೇಶ ಗಡಿಗೆ ಹೊಂದಿಕೊಂಡಂತೆ ಇರುವ ತನ್ನ ಎಲ್ಲ ಘಟಕಗಳಲ್ಲಿ ಆಗಸ್ಟ್ 15ರಂದು 'ಸ್ವಾತಂತ್ರ್ಯ ದಿನದ ನಡಿಗೆ' ಕಾರ್ಯಕ್ರಮ ಆಯೋಜಿಸಬೇಕು ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ಸೂಚಿಸಿದೆ.

ಹಿರಿಯ ಅಧಿಕಾರಿಗಳು ಆಗಸ್ಟ್ 14 ಮತ್ತು 15ರ ರಾತ್ರಿಯನ್ನು ಪ್ರತಿ ಗಡಿ ಭಾಗದ ನಿಯೋಜಿತ ತುಕಡಿಗಳಲ್ಲಿ ಕಳೆಯುವಂತೆ ಕ್ರಮವಹಿಸಬೇಕು ಎಂದು ತನ್ನ ಎಲ್ಲ ಕಮಾಂಡರ್ ಗಳಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳುತಿಳಿಸಿದ್ದಾರೆ. 74ನೇ ಸ್ವಾತಂತ್ರ್ಯೊತ್ಸವದ ನಿಮಿತ್ತ ಈ ತೀರ್ಮಾನಕ್ಕೆ ಬರಲಾಗಿದೆ.

ಮುಖ್ಯ ಕಚೇರಿಯಿಂದ ಅಗಸ್ಟ್ 6ರಂದೇ ಈ ಕುರಿತು ಆದೇಶವನ್ನು ಹೊರಡಿಸಲಾಗಿದೆ ಎಂದು ಬಿ.ಎಸ್.ಎಫ್ ಮುಖ್ಯಸ್ಥ ಎಸ್.ಎಸ್.ದೇಸ್ವಾಲ್ ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.