ADVERTISEMENT

ಕದನವಿರಾಮ ಉಲ್ಲಂಘನೆ: ಪಾಕ್‌ ಪಡೆಗಳಿಂದ ಗುಂಡಿನ ದಾಳಿ ಬಿಎಸ್ಎಫ್‌ ಎಸ್‌ಐ ಸಾವು

ಪಿಟಿಐ
Published 13 ನವೆಂಬರ್ 2020, 11:07 IST
Last Updated 13 ನವೆಂಬರ್ 2020, 11:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಶುಕ್ರವಾರ ಪಾಕಿಸ್ತಾನದ ಪಡೆಗಳು ಕದನವಿರಾಮ ಉಲ್ಲಂಘಿಸಿವೆ. ಗುಂಡಿನ ದಾಳಿಯಿಂದಾಗಿ ಬಿಎಸ್‌ಎಫ್‌ನ ಸಬ್‌ ಇನ್ಸ್ ಪೆಕ್ಟರ್‌ವೊಬ್ಬರು ಮೃತಪಟ್ಟಿದ್ದು, ಯೋಧರೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾರಾಮುಲ್ಲಾ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ಸಬ್‌ ಇನ್ಸ್ ಪೆಕ್ಟರ್ ರಾಕೇಶ್ ದೋವಲ್ ಮೃತಪಟ್ಟಿದ್ದಾರೆ. ಯೋಧರೊಬ್ಬರ ತಲೆಗೆ ತೀವ್ರ ಪೆಟ್ಟಾಗಿದೆ. ಇನ್ನೊಬ್ಬ ಯೋಧ ವಾಸುರಾಜಾ ಅವರಿಗೆ ಅಲ್ಪಪ್ರಮಾಣದಲ್ಲಿ ಪೆಟ್ಟಾಗಿದೆ ಎಂದು ತಿಳಿಸಿದ್ದಾರೆ.

ವೈರಿ ದೇಶದ ಪಡೆಗಳ ಕದನವಿರಾಮ ಉಲ್ಲಂಘನೆ ವಿರುದ್ಧದ ಹೋರಾಟದಲ್ಲಿ ಎಸ್‌ಐ ಹುತಾತ್ಮರಾಗಿದ್ದಾರೆ. ಇವರು ಉತ್ತರಾಖಂಡ ನಿವಾಸಿ. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಗುಂಡಿನ ದಾಳಿ ಘಟನೆಗಳು ಮುಂದುವರಿದಿವೆ. ಬಿಎಸ್‌ಎಫ್ ಯೋಧರು ಇದಕ್ಕೆ ಪರಿಣಾಮಕಾರಿಯಾಗಿ ಪ್ರತಿರೋಧ ತೋರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.