ADVERTISEMENT

ಬಿಜೆಪಿ ಜೊತೆ ಮೈತ್ರಿಗಿಂತ ನಿವೃತ್ತಿ ಮೇಲು: ಮಾಯಾವತಿ

ಪಿಟಿಐ
Published 2 ನವೆಂಬರ್ 2020, 16:34 IST
Last Updated 2 ನವೆಂಬರ್ 2020, 16:34 IST
ಮಾಯಾವತಿ
ಮಾಯಾವತಿ   

ಲಖನೌ: ‘ಬಿಜೆಪಿ ಮತ್ತು ಬಿಎಸ್‌ಪಿ ಸಿದ್ಧಾಂತ ಪರಸ್ಪರ ವಿರುದ್ಧವಾಗಿವೆ. ಬಿಜೆಪಿ ಜೊತೆಗೆ ತಮ್ಮ ಪಕ್ಷ ಎಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ಕೋಮುವಾದಿ ಪಕ್ಷದ ಜೊತೆಗೆ ಮೈತ್ರಿ ಬದಲಾಗಿ ನಿವೃತ್ತಿ ಹೊಂದಲು ಬಯಸುತ್ತೇನೆ. ಕೋಮುವಾದಿ, ಜಾತೀಯವಾದಿ ಪಕ್ಷಗಳು ಮತ್ತು ಬಂಡವಾಳಶಾಹಿ ಪಡೆಗಳ ವಿರುದ್ಧ ಎಲ್ಲ ರೀತಿಯಲ್ಲಿ ಹೋರಾಡಲಿದ್ದೇನೆ ಎಂದರು.

‘ಇತ್ತೀಚೆೆಗೆ ತಾವು ನೀಡಿದ್ದ ಹೇಳಿಕೆಯನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಮುಸಲ್ಮಾನರು ಪಕ್ಷದಿಂದ ದೂರ ಉಳಿಯಬೇಕು ಎಂಬುದು ಆ ಪಕ್ಷಗಳ ಉದ್ದೇಶವಾಗಿದೆ’‌ ಎಂದು ಟೀಕಿಸಿದರು.

ADVERTISEMENT

ಭವಿಷ್ಯದಲ್ಲಿ ಯಾವುದೇ ಚುನಾವಣೆಯಲ್ಲಿಯೂ ಬಿಜೆಪಿ ಮತ್ತು ಬಿಎಸ್‌ಪಿ ಮೈತ್ರಿ ಸಾಧ್ಯವಿಲ್ಲ. ಕೋಮುವಾದಿ ಪಕ್ಷದ ಜೊತೆಗೂಡಿ ಬಿಎಸ್‌ಪಿ ಸ್ಪರ್ಧೆ ನಡೆಸುವುದಿಲ್ಲ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಮುಂದಿನ ಮೇಲ್ಮನೆ ಚುನಾವಣೆಯಲ್ಲಿ ತಮ್ಮ ಪಕ್ಷವು ಸಮಾಜವಾದಿ ಪಕ್ಷ ಬೆಂಬಲಿಸುವ ಅಭ್ಯರ್ಥಿಯ ಸೋಲಾಗುವಂತೆ ಎಲ್ಲ ಯತ್ನ ನಡೆಸಲಿದೆ ಎಂದು ಹೇಳಿದರು

ಎಸ್‌ಪಿ ಅಭ್ಯರ್ಥಿ ಸೋಲಿಸುವ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಯೂ ಸೇರಿದಂತೆ ಯಾವುದೇ ಪ್ರಬಲ ಅಭ್ಯರ್ಥಿಯನ್ನು ತಮ್ಮಪಕ್ಷ ಬೆಂಬಲಿಸಲಿದೆ ಎಂದು ಅವರು ಪುನರುಚ್ಚರಿಸಿರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.