ಮತದಾನ
– ಪ್ರಜಾವಾಣಿ ಚಿತ್ರ
ನವದೆಹಲಿ: ದೇಶದ ನಾಲ್ಕು ರಾಜ್ಯಗಳಲ್ಲಿನ 5 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಉಪಚುನಾವಣೆ ನಡೆಯುತ್ತಿದ್ದು ಸಂಜೆ 4 ಗಂಟೆಯ ವೇಳೆಗೆ ಶೇ 55ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಗುಜರಾತ್ ರಾಜ್ಯದ ವಿಸವಾದರ್ ಮತ್ತು ಕಾಡಿ ವಿಧಾನಸಭಾ ಕೇತ್ರಗಳು, ಕೇರಳದ ನೀಲಂಬರ್, ಪಶ್ಚಿಮ ಬಂಗಾಳದ ಕಾಳಿಗಂಜ್ ಹಾಗೂ ಪಂಜಾಬ್ ರಾಜ್ಯದ ಲುಧಿಯಾನ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.
ಇಲ್ಲಿಯವರೆಗೂ ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮತದಾನ ಸಂಜೆ 6 ಗಂಟೆವರೆಗೂ ನಡೆಯಲಿದ್ದು ಮತ ಎಣಿಕೆ ಜೂನ್ 23ರಂದು ಜರುಗಲಿದೆ.
ವಿಸವಾದರ್ ಮತ್ತು ಕಾಡಿ ವಿಧಾನಸಭಾ ಕೇತ್ರಗಳಲ್ಲಿ ಬಿಜೆಪಿ–ಕಾಂಗ್ರೆಸ್, ನೀಲಂಬರ್ ಕ್ಷೇತ್ರದಲ್ಲಿ ಯುಡಿಎಫ್–ಎಲ್‌ಡಿಎಫ್, ಕಾಳಿಗಂಜ್ ಕ್ಷೇತ್ರದಲ್ಲಿ ಟಿಎಂಸಿ–ಬಿಜೆಪಿ, ಲುಧಿಯಾನದಲ್ಲಿ ಎಎಪಿ–ಬಿಜೆಪಿ ನಡುವೆ ನಡುವೆ ಪ್ರಬಲ ಪೈಪೋಟಿ ಇರಲಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.