ADVERTISEMENT

ಜುಲೈನಿಂದ ಪ್ರತಿದಿನ ಒಂದು ಕೋಟಿ ಜನರಿಗೆ ಕೋವಿಡ್‌ ಲಸಿಕೆ: ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 13:04 IST
Last Updated 1 ಜೂನ್ 2021, 13:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜುಲೈ ಅಥವಾ ಆಗಸ್ಟ್ ಆರಂಭದ ವೇಳೆಗೆ ದಿನಕ್ಕೆ ಒಂದು ಕೋಟಿ ಜನರಿಗೆ ಚುಚ್ಚುಮದ್ದು ನೀಡಲು ಸಾಕಷ್ಟು ಕೋವಿಡ್ -19 ಲಸಿಕೆ ಲಭ್ಯವಿರಲಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳ ಎರಡು ಡೋಸ್‌ಗಳನ್ನು ನೀಡುವ ಅಂತರದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಮುಂದಿನ ತೀರ್ಮಾನದವರೆಗೂ ಈ ಎರಡು ಲಸಿಕೆಗಳನ್ನು ಮಿಶ್ರಣ ಮಾಡಿ ಪ್ರಯೋಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಜಿಲ್ಲೆಗಳಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಮಾಣವು ವಾರಕ್ಕೆ ಶೇ 5ಕ್ಕಿಂತ ಕಡಿಮೆಗೆ ತಗ್ಗಿಸಬೇಕು. ದುರ್ಬಲ ವರ್ಗದ ಜನಸಂಖ್ಯೆಯಲ್ಲಿ ಶೇ 70ರಷ್ಟು ಜನರಿಗಾದರೂ ಲಸಿಕೆ ನೀಡುವಂತೆ ಕ್ರಮ ವಹಿಸಬೇಕು. ಅಲ್ಲದೇ, ಕೋವಿಡ್‌ ಮಾರ್ಗಸೂಚಿಗಳನ್ನು ಜಾರಿಗೆ ತರಲು ಸಮುದಾಯದ ಪಾಲ್ಗೊಳ್ಳುವಿಕೆಯೂ ಇರಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

ADVERTISEMENT

ಮೇ 7ರಂದು ಗರಿಷ್ಠ ಪ್ರಮಾಣದಲ್ಲಿ ಕೋವಿಡ್ 19 ಪ್ರಕರಣಗಳು ದಾಖಲಾಗಿತ್ತು. ನಂತರ ಇದರಲ್ಲಿ ಶೇ. 69ರಷ್ಟು ಕುಸಿತ ಕಂಡುಬಂದಿದೆ. 30 ರಾಜ್ಯಗಳಲ್ಲಿ ಕಳೆದ ವಾರದಿಂದ ಕೋವಿಡ್-19 ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ.344 ಜಿಲ್ಲೆಗಳಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಮಾಣವು ಶೇ. 5ಕ್ಕಿಂತ ಕಡಿಮೆಯಿದೆ. ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.