ರೈಲು
– ಪ್ರಜಾವಾಣಿ ಚಿತ್ರ
ನವದೆಹಲಿ: ಕರ್ನಾಟಕದ ಬಳ್ಳಾರಿ–ಚಿಕ್ಕಜಾಜೂರು ರೈಲು ಮಾರ್ಗದ ಸುಮಾರು 186 ಕಿ.ಮೀ ಉದ್ದಕ್ಕೆ ರೈಲ್ವೆ ಜೋಡಿಹಳಿ ಮಾರ್ಗ ನಿರ್ಮಾಣ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಬುಧವಾರ ಒಪ್ಪಿಗೆ ನೀಡಿದೆ.
ಜೊತೆಗೆ, ಕೊಡರಮಾ–ಬಡಕಾಕಾನ ರೈಲು ಮಾರ್ಗದ 133 ಕಿ.ಮೀ ಉದ್ದಕ್ಕೂ ಜೋಡಿಹಳಿ ನಿರ್ಮಾಣಕ್ಕೆ ಸಮಿತಿ ಒಪ್ಪಿಗೆ ನೀಡಿದೆ. ಕಲ್ಲಿದ್ದಲು ಉತ್ಪಾದನೆಯ ಪ್ರಮುಖ ಪ್ರದೇಶವಾದ ಕೊಡರಮಾನಿಂದ ಬಡಕಾಕಾನವರೆಗಿನ ರೈಲು ಮಾರ್ಗವು ಬಿಹಾರದ ಪಟ್ನಾ ಮತ್ತು ಜಾರ್ಖಂಡ್‌ನ ರಾಂಚಿ ನಗರಗಳಿಗೆ ಇರುವ ಹತ್ತಿರ ರೈಲು ಮಾರ್ಗವಾಗಿದೆ. ಬಳ್ಳಾರಿ–ಚಿಕ್ಕಜಾಜೂರು ರೈಲು ಮಾರ್ಗವು ಆಂಧ್ರ ಪ್ರದೇಶದ ಅನಂತರಪುರ ಜಿಲ್ಲೆಯನ್ನೂ ಹಾದು ಹೋಗುತ್ತದೆ
* ₹6,405 ಕೋಟಿ; ಯೋಜನೆಗೆ ವೆಚ್ಚ
* ಜಾರ್ಖಂಡ್, ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳ ಏಳು ಜಿಲ್ಲೆಗಳ 1,408 ಗ್ರಾಮಗಳಿಗೆ ಸಂಪರ್ಕ
* ದೇಶದಲ್ಲಿರುವ ರೈಲು ಮಾರ್ಗದ ಒಟ್ಟು ಜಾಲ 318 ಕಿ.ಮೀನಷ್ಟು ವಿಸ್ತರಣೆ
* ವಾರ್ಷಿಕವಾಗಿ 4.9 ಕೋಟಿ ಟನ್ ಸರಕು ಸಾಗಣೆ ಸಾಧ್ಯ. ಕಲ್ಲಿದ್ದಲು, ಕಬ್ಬಿಣದ ಅದಿರು, ಉಕ್ಕು, ಸಿಮೆಂಟ್, ರಾಸಾಯಕನಿಕಗಳು, ಕೃಷಿ ಮತ್ತು ಪೆಟ್ರೊಲಿಯಂ ಉತ್ಪನ್ನಗಳ ಸಾಗಾಟಕ್ಕೆ ಅನುಕೂಲ
ಪರಿಸರ ಪ್ರಯೋಜನ
* 52 ಕೋಟಿ ಲೀಟರ್ ತೈಲ ಆಮದು ಕಡಿತ
* 264 ಕೋಟಿ ಕೆ.ಜಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಕಡಿತ
‘ಆತ್ಮನಿರ್ಭರ’ ಅಭಿವೃದ್ಧಿ
ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಯೋಜನೆಯ ಫಲವಾಗಿ ಈ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಹಲವು ಸ್ಥರದ ಸಾಗಣೆಗಾಗಿ ಸಂಪರ್ಕ ಸಾಧಿಸುವುದು ಇದರ ಉದ್ದೇಶ. ಜನರು ಹಾಗೂ ಸರಕು ಸಾಗಣೆಗೆ ಈ ಯೋಜನೆಗಳಿಗೆ ತಡೆರಹಿತ ಸಂಚಾರ ಸಾಧ್ಯವಾಗಲಿದೆ. ರೈಲು ಮಾರ್ಗವು ಹಾದು ಹೋಗುವ ಪ್ರದೇಶಗಳು ‘ಆತ್ಮನಿರ್ಭರ’ವಾಗಿ ಅಭಿವೃದ್ಧಿ ಕಾಣಲಿದೆ. ಇದರಿಂದ ಉದ್ಯೋಗ ಮತ್ತು ಸ್ವ ಉದ್ಯೋಗ ಅವಕಾಶಗಳು ವೃದ್ಧಿಯಾಗಲಿವೆ.– ರೈಲ್ವೆ ಸಚಿವಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.