ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಶ್ವಾನಗಳೊಂದಿಗೆ ಸಿಬ್ಬಂದಿ
– ಪಿಟಿಐ ಚಿತ್ರ
ನಾಗರಕರ್ನೂಲ್ (ತೆಲಂಗಾಣ): ಭಾಗಶಃ ಕುಸಿದಿರುವ ಶ್ರೀಶೈಲಂ ಎಡದಂಡೆ ಕಾಲುವೆಯ(ಎಸ್‌ಎಲ್‌ಬಿಸಿ) ಸುರಂಗದಡಿ ಸಿಲುಕಿರುವ 8 ಮಂದಿ ಕಾರ್ಮಿಕರ ಪತ್ತೆಗಾಗಿ ಭಾನುವಾರ ಶ್ವಾನದಳವನ್ನು ಬಳಸಲಾಯಿತು.
‘16ನೇ ದಿನವೂ ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕೇವಲ ವಾಸನೆಯ ಆಧಾರದಲ್ಲಿ ವ್ಯಕ್ತಿಯ ಇರುವಿಕೆ ಅಥವಾ ಶವಗಳನ್ನು ಗುರುತಿಸುವಂತೆ ಈ ತಳಿಯ ಶ್ವಾನಗಳಿಗೆ ತರಬೇತಿ ನೀಡಲಾಗಿದೆ. ಈ ಶ್ವಾನಗಳನ್ನು ಭಾನುವಾರ ಸುರಂಗದೊಳಗೆ ಕರೆದೊಯ್ಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳ ಪೊಲೀಸ್ ಇಲಾಖೆಯಲ್ಲಿನ ಬೆಲ್ಜಿಯನ್ ಮಲಿನೋಸ್ ಜಾತಿಯ ನಾಯಿಗಳು ಸುಮಾರು 15 ಅಡಿ ಆಳದಲ್ಲಿನ ವಾಸನೆಯನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿವೆ. ಅವುಗಳು ಗುರುತಿಸುವ ಸ್ಥಳಗಳಲ್ಲಿ ಗುಂಡಿ ತೋಡಲಾಗುತ್ತದೆ.
ಕೊನೆಯ ಹಂತದ ಕಾರ್ಯಾಚರಣೆಯು ತುಂಬಾ ಅಪಾಯಕಾರಿಯಾಗಿರಲಿದೆ. ರಕ್ಷಣಾ ಸಿಬ್ಬಂದಿ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಭೂವಿಜ್ಞಾನ ಇಲಾಖೆ ಪ್ರಾಥಮಿಕ ವರದಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.