ಥಾಣೆ: ಇಲ್ಲಿಗೆ ಸಮೀಪದ ಭಿವಂಡಿ ಪಟ್ಟಣದಲ್ಲಿ ಶುಕ್ರವಾರ ಮುಂಜಾನೆ ಕೇಕ್ ಫ್ಯಾಕ್ಟರಿಯೊಂದು ಕುಸಿದಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡಿರುವ ಈ ಕಾರ್ಮಿಕರನ್ನು ಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಟ್ಟಡ ಕುಸಿತಕ್ಕೆ ಕಾರಣ ಇನ್ನೂ ತಿಳಿದಿಲ್ಲ ಎಂದು ಮಹಾನಗರ ಪಾಲಿಕೆಯ ಪ್ರಾದೇಶಿಕ ವಿಪತ್ತು ನಿರ್ವಹಣಾ ಘಟಕದ (ಆರ್‌ಡಿಎಂಸಿ) ಮುಖ್ಯಸ್ಥ ಸಂತೋಷ್ ಖದಮ್ ಅವರು ಮಾಹಿತಿ ನೀಡಿದರು.
ಸೆ. 21ರಂದು ಇದೇ ರೀತಿ ಮುಂಜಾನೆ 43 ವರ್ಷದಷ್ಟು ಹಳೆಯದಾದ ಮೂರು ಅಂತಸ್ತಿನ ಜಿಲಾನಿ ಕಟ್ಟಡ ಕುಸಿದುಬಿದ್ದಿತ್ತು. 33 ಮಂದಿ ಸಾವನ್ನಪ್ಪಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.